Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ರಸ್ತೆ ಒತ್ತುವರಿ ತೆರವು ಮಾಡಿಸದ  ಅಧಿಕಾರಿಗಳ ವಿರುದ್ಧ ಪ್ರತಿಭಟನೆ

ಮಂಡ್ಯ ನಗರದ ತಾಲೂಕು ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ  ಗಾಣದಾಳು ಗ್ರಾಮದ ರೈತರು ಒತ್ತುವರಿ ತೆರವು ಮಾಡದ ಅಧಿಕಾರಿಗಳ ವಿರುದ್ದ  ಪ್ರತಿಭಟನಾಧರಣಿ ನಡೆಸಿದರು.
ಬಳಿಕ ಮಾತನಾಡಿದ ರೈತ ಮುಖಂಡ ಜಿ.ಎಸ್.ಜಯರಾಮು ಗಾಣದಾಳು, ಗ್ರಾಮದಲ್ಲಿರುವ ಪಿಎಸ್.ಸುಜಾತಪುಟ್ಟಸ್ವಾಮಿ ಅವರು ಸಾರ್ವಜನಿಕ ಬೀದಿಯನ್ನು ಒತ್ತುವರಿ ಮಾಡಿಕೊಂಡಿರುವುದನ್ನು ತೆರವು ಮಾಡಿಸದೇ ಇದಕ್ಕೆ ಶಾಮೀಲು ಆಗಿರುವ ತಾಲೂಕು ಪಂಚಾಯಿತಿ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ಅಧಿಕಾರಿಗಳ ಪಿತೂರಿಯಿಂದ ಸಾರ್ವನಿಕರ ಬೀದಿ ಒತ್ತುವರಿಯಾಗಿದೆ, ಅಧಿಕಾರಿಗಳು ದೂರು ನೀಡಿದ್ದರೂ ನಮ್ಮ ಮೇಲೆಯೇ ತಪ್ಪು ಒರಿಸುತ್ತಾರೆ, ನ್ಯಾಯಕೇಳಿದವರ ಮೇಲೆಯೇ ದಬ್ಬಾಳಿಕೆ ಮಾಡುವ ಇಂತಹ ಅಧಿಕಾರಿಗಳು ಜನಸೇವಕರು ಬೇಡವೇ ಬೇಡ ಎಂದು ಆಕ್ರೋಶ ಹೊರಹಾಕಿದರು.ಸುಮಾರು ೬-೭ ಅಡಿಗಳಷ್ಟು ಜಾಗವನ್ನು ಸ್ವಂತ ಜಾನವಾರುಗಳನು ಕಟ್ಟಿಹಾಕಲು ಬಳಸಿಕೊಳ್ಳುತ್ತಿರುವುದನ್ನು ತೆರವು ಗೊಳಿಸಿ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಾಧ್ಯವಾಗುತ್ತಿಲ್ಲ, ಲಂಚಪಡೆದು ಅಕ್ರಮಗಾರರಿಗೇ ಸಹಕಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಕೂಡಲೇ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಈ ಸಮಸ್ಯೆಯನ್ನು ಬಗೆಯರಿಸಿ, ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡ ಮಂಜು, ಚನ್ನಕೇಶವ, ಶಿವಮ್ಮ, ಪುಟ್ಟಸ್ವಾಮಿ, ರತ್ನ,ಆನಂದ್, ನಾಗರಾಜು, ರುದ್ರೇಶ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!