Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿರುವ,ಪಡೆದಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ಮನವಿ

ಮಂಡ್ಯ: ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ದೊಡ್ಡಗರುಡನಹಳ್ಳಿ ಗ್ರಾಮಸ್ಥರು ತಹಶೀಲ್ದಾರ್‌ ಶಿವಕುಮಾರ ಬಿರದಾರ್ ರವರಿಗೆ ಮನವಿ ನೀಡಿದರು.
ಭವಾನಿಕೊಪ್ಪಲು ಗ್ರಾಮದಲ್ಲಿ ಲೋಕೇಶ್‌ರಾವ್‌ ಅವರು ವಾಸವಿದ್ದು ಇವರು ದೊಡ್ಡಗರುಡನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಗೆ ಸ್ಪರ್ಧಿಸಿದ್ದು, ಮೂಲತಃ ಇವರು ಮರಾಠ ಕ್ಷತ್ರಿಯ ಜಾತಿಗೆ ಸೇರಿದ್ದು 3ಬಿ ಪ್ರವರ್ಗಕ್ಕೆ ಸೇರಿರುತ್ತಾರೆ. ಹಾಲು ಉತ್ಪಾದಕರ ಸಹಕಾರ ಸಂಘದ

ಚುನಾವಣೆಗೆ ನಾಮಪತ್ರವನ್ನು ಸಲ್ಲಿಸುವಾಗ ತಮ್ಮ ಕಚೇರಿಯಿಂದ 2ಎ ಪ್ರವರ್ಗಕ್ಕೆ ಸೇರಿದ್ದಾರೆಂದು ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಆರೋಪಿಸಿದರು.
ಈ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿರುವುದರ ಬಗ್ಗೆ ತನಿಖೆ ನಡೆಸಿ, ಅವರಿಗೆ ನೀಡಿರುವ 2ಎ ಪ್ರವರ್ಗದ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸುವುದರ ಜೊತೆಗೆ ಈ ಪ್ರಮಾಣ ಪತ್ರವನ್ನು ನೀಡಲು ಸಹಕರಿಸುವ ಬಸರಾಳು–2 ಗ್ರಾಮಾಢಳಿತಾಧಿಕಾರಿ ಮತ್ತು ರಾಜಸ್ವ ನಿರೀಕ್ಷಕರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇದರ
ಜೊತೆಗೆ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಪಡೆದಿರುವ ಲೋಕೇಶ್‌ರಾವ್‌ ಅವರ ಮೇಲೆ ಕ್ರಿಮಿನಲ್‌ ಕೇಸ್‌ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಚನ್ನಕೇಶವ, ಪಟೇಲ್‌ ಆನಂದ, ಸೋಮಶೇಖರ್‌, ಅಂದಾನಿಕುಮಾರ್‌ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!