
ಸ್ವಂತಮನೆ ನಮ್ಮಹಕ್ಕು ಹೋರಾಟ ಸಮಿತಿಯ ಸಂಚಾಲಕ ಬಿಕೆ ಸತೀಶ್ ರವರು ಆಡಳಿತಾತ್ಮಕವಾಗಿ ಸಾರ್ವಜನಿಕರಿಗೆ ಜನಸ್ನೇಹಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಜಿಪಂ ಸಿಇಒ ನಂದಿನಿ ಕೆ. ಆರ್ ರವರಿಗೆ ಗೆ ಬಹಿರಂಗ ಪತ್ರ ಬರೆದಿದ್ದಾರೆ.
ಮಾನ್ಯರೇ
ತಮ್ಮ ಕಾರ್ಯವ್ಯಾಪ್ತಿಯ ಈ ಕೆಲಸಗಳ ಪ್ರಗತಿ ಕುರಿತು ಪರಿಶೀಲಿಸಿ ಅಭಿವೃದ್ಧಿಗೆ ವೇಗ ನೀಡುವ ಕುರಿತು
ತಾವು ಮಂಡ್ಯ ಸಿಇಒ ಆಗಿ ಅಧಿಕಾರ ವಹಿಸಿಕೊಂಡು 2 ತಿಂಗಳಾಗಿದೆ. ಈ ಅವಧಿಯಲ್ಲಿ ತಾವು ಇಲಾಖೆಗಳ ಅಭಿವೃದ್ಧಿ ಅಧ್ಯಯನ, ಸಭೆ ಮುಂತಾಗಿ ತಲ್ಲೀನರಾಗಿರುವ ಹಿನ್ನಲೆಯಲ್ಲಿ ನಿಮ್ಮ ಭೇಟಿ ಮಾಡಿ ಮನವಿ ಸಲ್ಲಿಸಲಾಗಿಲ್ಲ.
ಮೊನ್ನೆ ಜಿಪಂಗೆ ನೀಡಿರುವ ದೂರು ಸಂಬಂಧ ತಮ್ಮನ್ನು ಭೇಟಿ ಮಾಡಲು ಆಗಮಿಸಿದಾಗ ತಾವು ನಡೆದುಕೊಂಡ ರೀತಿ ಬೇಸರ ಹುಟ್ಟಿಸಿದೆ. ಕಾರಣ ತಾವು ನಮ್ಮ ಹೋರಾಟದ ಹಾದಿ ಹಾಗೂ ನಿವೇಶನರಹಿತರ ಬವಣೆ ತಿಳಿಯದೆ ಉಢಾಫೆ ಉತ್ತರ ನೀಡಿ ಕಳುಹಿಸಿದ್ದು ಮಾತ್ರ ನಾಗರೀಕ ಸೇವಾ ಅಧಿಕಾರಿಯಾಗಿ ಸರಿಯಾದ ವರ್ತನೆಯಲ್ಲ ಎಂದು ಹೇಳಲು ವಿಷಾದಿಸುತ್ತೇವೆ.
ಜಿಪಂನ ವ್ಯಾಪ್ತಿಯಲ್ಲಿನ ಕೆಲ ಅಭಿವೃದ್ಧಿ ಕಾರ್ಯಕ್ರಮಗಳು ಕುಂಠಿತವಾಗಿರುವ ಇಲ್ಲ ಕುಂಟುತ್ತಾ ಸಾಗುತ್ತಿರುವ ಬಗ್ಗೆ ತಮ್ಮ ಗಮನ ಸೆಳೆಯಲು ಬಯಸುತ್ತೇವೆ. ಈ ಕುರಿತು ತಾವು ದಿಟ್ಟ ಕ್ರಮ ಕೈಗೊಳ್ಳುತ್ತಿರೆಂದು ಅಶಿಸುತ್ತೇವೆ.
1. ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ (NRLM) ತರಬೇತಿ, ಸಾಲ ವಿತರಣೆ ಮುಂತಾಗಿ ಸಾಧಿಸುತ್ತಿರುವ ಪ್ರಗತಿ ಬಗ್ಗೆ ಗಮನ ಹರಿಸಿ
2. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ಘನ-ದ್ರವ ತ್ಯಾಜ್ಯ ವಿಲೇವಾರಿಯಾಗುತ್ತಿಲ್ಲ. ಘನ ತ್ಯಾಜ್ಯ ವಿಲೇವಾರಿಗೆ ಎಷ್ಟು ಗ್ರಾಪಂಗಳು ಸ್ವಚ್ಛಸಂಕೀರ್ಣ ಕಟ್ಟಡ ನಿರ್ಮಿಸಿವೆ. ಈ ಬಗ್ಗೆ ನಿಮ್ಮ ಕ್ರಮವೇನು?
3. ಜಲಜೀವನ್ ಮಿಷನ್ ಅಡಿ ಕಾಮಗಾರಿ ಮುಗಿದು ಬಿಲ್ ಪಾವತಿಯಾದರೂ ಕಾರ್ಯ ಅರಂಭಿಸದ ಘಟಕಗಳೆಷ್ಟು? ಕಳಪೆ ಕಾಮಗಾರಿಗಳ ವಿರುದ್ದ ಏನು ಕ್ರಮವಾಗುತ್ತಿದೆ.
4. ಗ್ರಾಪಂಗಳ ಖರೀದಿಯಲ್ಲಿ ಎಷ್ಟು ಗ್ರಾಪಂಗಳು ಜೆಮ್’ನಲ್ಲಿ ಖರೀದಿ ಮಾಡುತ್ತಿವೆ. ಸ್ಥಳೀಯವಾಗಿ ಖರೀದಿಸುವ ಗ್ರಾಪಂಗಳು ಪಾರದರ್ಶಕ ಕಾಯ್ದೆ ಉಲ್ಲಂಘಿಸುತ್ತಿವೆ ಎಂಬ ಮಾಹಿತಿ ತೆಗೆದು ಕ್ರಮ ವಹಿಸಿ
5. ಮಹಾತ್ಮಗಾಂಧಿ ಉದ್ಯೋಗಖಾತ್ರಿ ನಿಯಮದಡಿ ಗ್ರಾಮಸಭೆಯ ಅನುಮೋದನೆಗೆ ಡಿಸೆಂಬರ್ ತಿಂಗಳಿನಲ್ಲಿ ನೀಡುವ ಲೇಬರ್ ಬಜೆಟ್ ಏಕೆ ಅನುಮೋದನೆಯಾಗುತ್ತಿಲ್ಲ
6. ಜಿಲ್ಲೆಯ ತಾಪಂ ಅಧಿಕಾರಿಗಳು, ಪಿಡಿಒಗಳ ವಿರುದ್ದ ಆರೋಪ ಸಾಬೀತಾದರೂ ಕ್ರಮ ವಹಿಸುವ, ವಹಿಸಿರುವ ಬಗ್ಗೆ ಮಾಹಿತಿ ಬಿಡುಗಡೆ ಮಾಡಿ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಕ್ರಮ ವಹಿಸಿ
7. ಜಿಲ್ಲೆಯಲ್ಲಿ ಬೂದ ಬಣ್ಣದ ನೀರಿನ ನಿರ್ವಹಣೆ ಕಾಮಗಾರಿ ಪ್ರಗತಿ ಪರಿಶೀಲಿಸಿ
8. ಗ್ರಾಮಸಭೆ, ಇ ಸ್ವತ್ತು, ಸಾಮಾನ್ಯಸಭೆಗಳ ವರದಿ ಫಾಲೋ ಆಪ್ ಮಾಡಲು ನೇಮಿಸಿರುವ ಮೇಲಾಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಿ ಎಷ್ಟು ಅಕ್ರಮ ಪತ್ತೆ ಹಚ್ಚಿದ್ದಾರೆ ಎಂಬುದನ್ನು ಸಾರ್ವಜನಿಕವಾಗಿ ತಿಳಿಸಿ,
ಈ ಮೇಲ್ಕಂಡ ಪ್ರಮುಖವಾದ ಜನಪರ ಕಾರ್ಯಕ್ರಮಗಳನ್ನು ಜಾರಿ ಮಾಡಲು ತಾವು ಮುಂದಾಗಬೇಕಿದೆ. ಅಲ್ಲದೆ ಸಾರ್ವಜನಿಕರ ಅಹವಾಲು ಸ್ವೀಕಾರ ಮತ್ತು ದೂರು ಪರಿಹರಿಸಲು ಹೆಚ್ಚಿನ ಸಮಯ ನಿಗದಿಗೊಳಿಸಿ ಅದನ್ನು ಮಾಧ್ಯಮಗಳಲ್ಲಿ ಪ್ರಚುರಗೊಳಿಸಲು ಕ್ರಮವಹಿಸುವಂತೆ ಮನವಿ ಮಾಡುತ್ತೇನೆ.
ಬಿ.ಕೆ.ಸತೀಶ್,ಸಂಚಾಲಕ

Leave a Reply