
ಮಂಡ್ಯ ತಾಲೂಕಿನ ಪಣಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಭಾಗ್ಯ ಆವಿರೋಧವಾಗಿ ಆಯ್ಕೆಯಾದರು. ಇಂದಿನ ಅಧ್ಯಕ್ಷರಾಗಿದ್ದ ಬೋರೇಗೌಡ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರ ಹಿನ್ನೆಲೆಯಲ್ಲಿ ಇಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಭಾಗ್ಯ ಹೊರತುಪಡಿಸಿ ಬೇರೆ ಯಾರೂ ಕೂಡ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣೆ ಅಧಿಕಾರಿಯಾದ ಎಚ್ ಎಸ್ ಮುಕ್ತ ರವರು ಪಣಕನಹಳ್ಳಿ ಗ್ರಾಮದ ಬೋರಲಿಂಗೇಗೌಡರ ಧರ್ಮ ಪತ್ನಿ ಯಾದ ಶ್ರೀಮತಿ ಭಾಗ್ಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ನೂತನ ಅಧ್ಯಕ್ಷೆ ಭಾಗ್ಯ ರವರನ್ನು ನಿರ್ದೇಶಕರುಗಳಾದ ಬೋರೇಗೌಡ, ಕ್ಯಾತಯ್ಯ, ಕೃಷ್ಣ, ಪುಷ್ಪಲತಾ,ಮಂಗಳಮ್ಮ ಜೈ ಶಂಕರ, ಶೋಭಾ, ಗ್ರಾಮ ಪಂಚಾಯತಿ ಅಧ್ಯಕ್ಷ ಆನಂದ್ ಸೇರಿದಂತೆ ಹಲವರು ಅಭಿನಂದಿಸಿದರು.

Leave a Reply