
ಮಂಡ್ಯ ನಗರದ ಗುತ್ತಲಿನಲ್ಲಿ ನೂತನವಾಗಿ ಶುಕ್ರವಾರದಂದು ಮೋರ್ ಸೂಪರ್ ಮಾರ್ಕೇಟ್ ಕಂಪನಿ ಮಳಿಗೆಯನ್ನು ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಮೋರ್ನಲ್ಲಿ ಗುಣಮಟ್ಟದ ಪದಾರ್ಥಗಳು ಸಿಗುವುದರಿಂದ ಸ್ಥಳೀಯರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಈ ಭಾಗದಲ್ಲಿ ಮಳಿಗೆಯನ್ನು ತೆರೆಯಲಾಗಿದೆ. ಇದರ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳಬಹುದು. ಜೊತೆಗೆ ಆಕರ್ಷಕ ರಿಯಾಯತಿಯಲ್ಲಿ ಕೊಡುಗೆಗಳು ಇರುತ್ತವೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವನಂಜು, ನಾಗೇಂದ್ರ, ಸರ್ಕಲ್ ಡೈರೆಕ್ಟರ್ ಅಂಕಿತಾ ಆಕಾಶ್, ಪ್ರಾದೇಶಿಕ ವ್ಯವಸ್ಥಾಪಕ ಜಮೀರ್ ಪಾಷಾ, ಮ್ಯಾನೇಜರ್ ಸುರೇಶ್, ಕ್ಲಸ್ಟರ್ ಮ್ಯಾನೇಜರ್ ಶೇಖರ್ ಜಿ.ಬಿ, ಸ್ಟೋರ್ ಮ್ಯಾನೇಜರ್ ನಾಗರಾಜು ಭಾಗವಹಿಸಿದ್ದರು.

Leave a Reply