Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಮೋರ್‌ ಸೂಪರ್‌ ಮಾರ್ಕೇಟ್‌ ಮಳಿಗೆ ಪ್ರಾರಂಭ

ಮಂಡ್ಯ ನಗರದ ಗುತ್ತಲಿನಲ್ಲಿ ನೂತನವಾಗಿ ಶುಕ್ರವಾರದಂದು ಮೋರ್‌ ಸೂಪರ್‌ ಮಾರ್ಕೇಟ್‌ ಕಂಪನಿ ಮಳಿಗೆಯನ್ನು ನಗರಸಭೆ ಮಾಜಿ ಅಧ್ಯಕ್ಷ ಎಚ್‌.ಎಸ್‌.ಮಂಜು ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಮೋರ್‌ನಲ್ಲಿ ಗುಣಮಟ್ಟದ ಪದಾರ್ಥಗಳು ಸಿಗುವುದರಿಂದ ಸ್ಥಳೀಯರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಈ ಭಾಗದಲ್ಲಿ ಮಳಿಗೆಯನ್ನು ತೆರೆಯಲಾಗಿದೆ. ಇದರ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳಬಹುದು. ಜೊತೆಗೆ ಆಕರ್ಷಕ ರಿಯಾಯತಿಯಲ್ಲಿ ಕೊಡುಗೆಗಳು ಇರುತ್ತವೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶಿವನಂಜು, ನಾಗೇಂದ್ರ, ಸರ್ಕಲ್‌ ಡೈರೆಕ್ಟರ್‌ ಅಂಕಿತಾ ಆಕಾಶ್‌, ಪ್ರಾದೇಶಿಕ ವ್ಯವಸ್ಥಾಪಕ ಜಮೀರ್‌ ಪಾಷಾ, ಮ್ಯಾನೇಜರ್‌ ಸುರೇಶ್‌, ಕ್ಲಸ್ಟರ್‌ ಮ್ಯಾನೇಜರ್‌ ಶೇಖರ್‌ ಜಿ.ಬಿ, ಸ್ಟೋರ್‌ ಮ್ಯಾನೇಜರ್‌ ನಾಗರಾಜು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!