Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಕೆಆರ್‌ಎಸ್‌ ಪಕ್ಷದ ಜಿಲ್ಲಾಧ್ಯಕ್ಷರಾಗಿ ಮಲ್ಲೇಶ್ ಹೆಬ್ಬಕವಾಡಿ ನೇಮಕ

ಮಂಡ್ಯ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಘಟಕದ ನೂತನ ಸಮಿತಿಯನ್ನು ರಚಿಸಲಾಗಿದೆ ಎಂದು ಪಕ್ಷದ ರಾಜ್ಯ ಸಂಘಟನಾ ಕಾರ್‍ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ರಮೇಶ್‌ಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಎಲ್ಲ ಜಿಲ್ಲಾ ಸಮಿತಿಗಳನ್ನು ನೂತನವಾಗಿ ರಚಿಸಲಾಗಿದೆ. ಅಂತೆಯೇ ಮಂಡ್ಯದಲ್ಲಿಯೂ ನೂತನ ಸಮಿತಿ ಅಸ್ಥಿತ್ವಕ್ಕೆ ಬಂದಿದೆ ಎಂದರು.
ಜಿಲ್ಲಾಧ್ಯಕ್ಷರಾಗಿ ಮಲ್ಲೇಶ್ ಹೆಬ್ಬಕವಾಡಿ, ಪ್ರಧಾನ ಕಾರ್‍ಯದರ್ಶಿಯಾಗಿ ಶಿವಪುರ ನಾಗರಾಜ್, ಕಾರ್‍ಯದರ್ಶಿಗಳಾಗಿ ಚಂದ್ರು ಕೀಲಾರ, ವೈ.ಕೆ.ಶಶಿಧರ್, ಮಾದೇಗೌಡ, ಸಂಘಟನಾ ಕಾರ್‍ಯದರ್ಶಿಯಾಗಿ ಕೆ.ಆರ್.ಮಂಜುನಾಥ್ ಅವರನ್ನು ಆಯ್ಕೆ ಮಾಡಿ ಆದೇಶಿಸಲಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ರಾಜ್ಯ ಕಾರ್‍ಯದರ್ಶಿ ಅರುಣ್‌ಕುಮಾರ್, ಜಿಲ್ಲಾಧ್ಯಕ್ಷ ಮಲ್ಲೇಶ್ ಹೆಬ್ಬಕವಾಡಿ, ಪ್ರಧಾನ ಕಾರ್‍ಯದರ್ಶಿ ಶಿವಪುರ ನಾಗರಾಜ್, ಕಾರ್‍ಯದರ್ಶಿಗಳಾದ ಚಂದ್ರು ಕೀಲಾರ, ವೈ.ಕೆ.ಶಶಿಧರ್, ಮಾದೇಗೌಡ, ಸಂಘಟನಾ ಕಾರ್‍ಯದರ್ಶಿ ಕೆ.ಆರ್.ಮಂಜುನಾಥ್ ಇದ್ದರು.

Leave a Reply

Your email address will not be published. Required fields are marked *

error: Content is protected !!