
ಮಳವಳ್ಳಿ: ಪೋಡಿ ಮಾಡಿ ಖಾತೆ ಮಾಡಿಸಿ ಕೊಡುವುದಾಗಿ ಹೇಳಿ ವ್ಯಕ್ತಿಯೊಬ್ಬನಿಂದ 10 ಸಾವಿರ ರೂ ಲಂಚ ಪಡೆಯುತ್ತಿದ್ದ ವೇಳೆ ರೆವಿನ್ಯೂ ಇನ್ಸ್ ಪೆಕ್ಟರ್ ಲೋಕಾಯುಕ್ತ ಬಲೆಗೆ ಸಿಕ್ಕ ಬಿದ್ದ ಘಟನೆ ಮಳವಳ್ಳಿ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ನಡೆದಿದೆ.
ಹಲಗೂರು ಹೋಬಳಿ ರೆವಿನ್ಯೂ ಇನ್ಸ್ ಪೆಕ್ಟರ್ ಮಧುಸೂದನ್ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದದವವರು.
ದಳವಾಯಿಕೊಡಹಳ್ಳಿ ಗ್ರಾಮದ ನಂಜುಂಡಸ್ವಾಮಿರವರು ದಳವಾಯಿಕೋಡಹಳ್ಳಿ ಗ್ರಾಮದ ಸರ್ವೆ ನಂಬರ್ 72ರಲ್ಲಿ ಇರುವ ಇನಾಮಿ ಜಮೀನು 5 ಎಕರೆ 28 ಗುಂಟೆ ಯನ್ನು ಪೋಡಿ ಮಾಡಿ ಖಾತೆ ಮಾಡಿಕೊಡಲು ಎಕರೆಗೆ 2 ಲಕ್ಷ ರೂ ಬೇಡಿಕೆ ಇಟ್ಟಿದ್ದು, ನಂಜುಂಡಸ್ವಾಮಿ ರವರ ತಾಯಿ ಕೆಂಪಮ್ಮ ಹೆಸರಿನಲ್ಲಿರುವ 12 ಗುಂಟೆ ಜಮೀನನ್ನು ಪೋಡಿ ಮಾಡಿ ಖಾತೆ ಮಾಡಲು ಮಧುಸೂದನ್ ರವರಿಗೆ ಲಂಚ ಕೇಳಿದ್ದಾರೆ ಲೋಕಾಯುಕ್ತರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಲೋಕಾಯುಕ್ತ ಎಸ್ ಪಿ ಸುರೇಶ್ ಬಾಬು, ಡಿವೈಎಸ್ ಪಿ ಸುನಿಲ್ ಕುಮಾರ್, ಮಾರ್ಗದರ್ಶನ ದಲ್ಲಿ ಇನ್ಸ್ ಪೆಕ್ಟರ್ ರವಿಕುಮಾರ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಬ್ಯಾಡರಗೌಡ ತಂಡ ಮಧುಸೂದನ್ ರವರು 10 ಸಾವಿರ ರೂ ಮುಂಗಡವನ್ನು ಪಡೆಯುವಾಗ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ .
ಈ ವೇಳೆ ಇನ್ಸ್ ಪೆಕ್ಟರ್ ರವಿಕುಮಾರ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಬ್ಯಾಡರಗೌಡ
ಶಂಕರ, ಸಿದ್ದಲಿಂಗಸ್ವಾಮಿ ಶರತ್, ಮಹದೇವ, ಮಾನಸ, ಶ್ರೀದೇವಿ ಇದ್ದರು.

Leave a Reply