Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಸಿಬ್ಬಂದಿಗಳ ಕೊರತೆಯಿಂದ ಕೆಲಸದಲ್ಲಿ ಒತ್ತಡಗಳು ಹೆಚ್ಚಾಗುತ್ತಿವೆ : ಇಓ ಲೋಕೇಶ್ ಮೂರ್ತಿ


ಮಂಡ್ಯ: ತಾಲೂಕಿನ ಹೆಚ್.ಮಲ್ಲಿಗೆರೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಚಿಕ್ಕಮರಿಗೌಡ ಹಾಗೂ ಪಿಡಿಒ ಶ್ರೀನಿವಾಸಯ್ಯ ಅವರು  ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ  ಅವರನ್ನು ಬೀಳ್ಕೊಟ್ಟು ಸನ್ಮಾನಿಸಲಾಯಿತು.
ಮಂಡ್ಯ ತಾಲೂಕು ಪಂಚಾಯಿತಿ ಸಾಮರ್ಥ್ಯಸೌಧ ಸಭಾಂಗಣದಲ್ಲಿ ಗ್ರಾಪಂ ಕಾರ್ಯದರ್ಶಿಗಳು ಹಾಗೂ ಪಿಡಿಒಗಳ ಸಂಘದ ವತಿಯಿಂದ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಇವರನ್ನು ಸನ್ಮಾನಿಸಿ ಮಾತನಾಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶ್ ಮೂರ್ತಿ ಅವರು ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳಲ್ಲಿ ಸಿಬ್ಬಂದಿಗಳ ಕೊರತೆ ಇರುವ ಕಾರಣದಿಂದ ಕೆಲಸದಲ್ಲಿ ಒತ್ತಡಗಳು ಹೆಚ್ಚಾಗುತ್ತಿವೆ.ಆದ್ದರಿಂದ ಎಲ್ಲಾ ಕೆಲಸಗಳನ್ನು ನಾವು ಮಾಡಬೇಕಾಗಿದೆ ಎಂದು ಹೇಳಿದರು.
ಸರ್ಕಾರಿ ಸೇವೆಯಿಂದ ನಿವೃತ್ತಿಗೊಂಡ  ಚಿಕ್ಕ ಮರಿಗೌಡ ಹಾಗೂ ಶ್ರೀನಿವಾಸಯ್ಯ ಅವರ  ಮುಂದಿನ ನಿವೃತ್ತಿ ಜೀವನವು ಆನಂದಮಯ  ವಾಗಿರಲಿ,ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ಆಯುಷ್ಯವನ್ನು ಕರುಣಿಸಲಿ ಎಂದು ಹೇಳಿದರು.
ನಿವೃತ್ತಿ ಸಂದರ್ಭದಲ್ಲಿ ನಿಮಗೆ ಸಿಗಬೇಕಾಗಿರುವ  ರಿಟೈರ್ಡ್ ಬೆನಿಫಿಟ್ ನ್ನು ಪಡೆದುಕೊಳ್ಳಲು ಬೇಗ ದಾಖಲಾತಿಗಳನ್ನು ಸಲ್ಲಿಸಿ ಎಂದು ಹೇಳಿದರು.
ಪಿಡಿಒಗಳ ಸಂಘದ ಅಧ್ಯಕ್ಷ ದೇವೇಗೌಡ ಮಾತನಾಡಿ ಸರ್ಕಾರಿ ಕೆಲಸಕ್ಕೆ ಸೇರಿದವರಿಗೆ ಪ್ರತಿಯೊಬ್ಬರ ಜೀವನದಲ್ಲಿ ನಿವೃತ್ತಿ ಎನ್ನುವುದು ಕಡ್ಡಾಯ ಇರುತ್ತದೆ. ಕೆಲವು ಅಧಿಕಾರಿಗಳು ನಿವೃತ್ತಿಗೆ ಮೊದಲು ಮರಣ ಹೊಂದುತ್ತಿದ್ದಾರೆ. ಶೇಕಡ 40ರಷ್ಟು ಜನರು ಮಾತ್ರ ತಮ್ಮ ಸೇವೆಯನ್ನ ಪೂರೈಸಿ ನಿವೃತ್ತಿ ಹೊಂದುತ್ತಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಗಳಲ್ಲಿ ನಿವೃತ್ತಿಗೊಂಡವರಿಗೆ ಪಿಡಿಒಗಳ ಸಂಘದಿಂದ ಅಭಿನಂದಿಸುವ ಕಾರ್ಯಕ್ರಮ ಮಾಡುತ್ತೇವೆ. ನಿವೃತ್ತಿಗೊಂಡವರಿಗೆ ಸರ್ಕಾರದ ಕಾನೂನು ಪ್ರಕಾರ ಅವರಿಗೆ ಕೊಡುವ  ಸರ್ಕಾರದ ಅನುದಾನವನ್ನು ಅಧಿಕಾರಿಗಳು ಬೇಗ ತಲುಪಿಸಿ ಅವರನ್ನು ಕಚೇರಿಗಳಿಗೆ ಅಲೆದಾಡಿಸುವುದು ಬೇಡ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಾದ ಮರಿಲಿಂಗಯ್ಯ, ಲೋಕೇಶ್, ಜವರಾಯಿ, ಸದಾಶಿವಮೂರ್ತಿ, ಪಿಡಿಒಗಳಾದ ಪ್ರಸನ್ನ,ಮಂಜುನಾಥ್, ಸುನೀಲ್, ಪವಿತ್ರ, ಮಂಜಮ್ಮ, ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!