
ಮಂಡ್ಯ: ಜಿಲ್ಲಾ ಪಂಚಾಯಿತಿ ಆವರಣದ ಸಂಪನ್ಮೂಲ ಕೇಂದ್ರ ಕಟ್ಟಡದಲ್ಲಿದ್ದ 60 ಟನ್‌ನಷ್ಟು ಹಳೆ ಕಬ್ಬಿಣ ಸಾಗಾಣಿಕೆ, ದುರ್ಬಳಕೆ ವಿರೋಧಿಸಿ ಭ್ರಷ್ಟಾಚಾರ ವಿರೋಧಿ ವೇದಿಕೆ ಕಾರ್ಯಕರ್ತರು ಜು.13 ರಂದು ನಗರದ ಕೆ.ಆರ್.ಐ.ಡಿ.ಎಲ್. ಕಾರ್ಯಪಾಲಕ ಅಭಿಯಂತರ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಜಯರಾಮು ತಿಳಿಸಿದ್ದಾರೆ.
ಜಿಪಂ ಆವರಣದಿಂದ ಹಳೇ ಕಬ್ಬಿಣದ ಸಾಮಗ್ರಿಗಳನ್ನು ನಿಯಮ ಉಲ್ಲಂಘಿಸಿ ಸಾಗಾಣಿಕೆ ಮಾಡಿ ಮಾರಾಟ ಮಾಡಿರುವುದು ಹಾಗೂ ಕಾಮಗಾರಿಗಳಲ್ಲಿ ಅವ್ಯವಹಾರ ಮತ್ತು ಕಳಪೆ ಕಾಮಗಾರಿಗಳನ್ನು ನಿರ್ವಹಿಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ಮಾ.11ರಂದು ಕಬ್ಬಿಣವನ್ನು ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಜಿಪಂ ಕಚೇರಿಗೆ ಮಾ.17ರಂದು ದೂರು ಮತ್ತು ಮನವಿ ನೀಡಲಾಗಿದೆ. ಸದರಿ ಕಚೇರಿಯಿಂದ ಕಾಮಗಾರಿ ನಿರ್ವಹಿಸಿರುವ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಕಬ್ಬಿಣವನ್ನು ಹರಾಜು ಪ್ರಕ್ರಿಯೆ ಮೂಲಕ ಮಾರಾಟ ಮಾಡಿರುವುದರ ಬಗ್ಗೆ ಮಾಹಿತಿ ಹಕ್ಕು ಅಡಿಯಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಏ.15ರಂದು ಹಿಂಬರಹ ನೀಡಲಾಗಿದೆ. ಜಿಪಂ ಕಚೇರಿಯಿಂದ ನೀಡಿರುವ ಮಾಹಿತಿಗೂ ನೀವು ಕಳುಹಿಸಿರುವ ಕಬ್ಬಿಣ ಕಳ್ಳತನವಾಗಿರುವ ವಿಚಾರಕ್ಕೂ ತಾಳೆಯಾಗದೆ ಪ್ರಶ್ನಾರ್ಥಕವಾಗಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಕಬ್ಬಿಣವನ್ನು ಬೇರೆ ಕಡೆ ಸ್ಥಳಾಂತರಿಸಿ ರುವುದಾಗಿ ಪತ್ರದ ಮೂಲಕ ತಿಳಿಸಿರುವುದು ನೀವೇ ಕಬ್ಬಿಣವನ್ನು ಕಳ್ಳ ಸಾಗಾಣಿಕೆಯಲ್ಲಿ ಮಾಡಿರುವುದು ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಒರನ್ನು ಒತ್ತಾಯಿ ಸಲಾಗುವುದು ಎಂದು ತಿಳಿಸಿದ್ದಾರೆ. ಕೆ.ಆರ್.ಐ. ಡಿ.ಎಲ್. ಅಭಿಯಂತರರು ಅಕ್ರಮದಲ್ಲಿ ಭಾಗಿಯಾಗಿ ಕಬ್ಬಿಣವನ್ನು ಬೇರೆಡೆಗೆ ಸಾಗಿಸಿದ್ದಾರೆ. ಇವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಧೀಕ್ಷಕ ಇಂಜಿನಿಯರ್‌ಅವರನ್ನು ಆಗ್ರಹಿಸಿದ್ದಾರೆ.

Leave a Reply