Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ನಾಪತ್ತೆ : ಪೊಲೀಸರಿಗೆ ದೂರು

ಮಂಡ್ಯ ಜಿಲ್ಲಾ ಪಂಚಾಯತಿ ಆಡಳಿತ ಅಧಿಕಾರಿ ಮನೋಜ್ ಕುಮಾರ್ ಮೀನಾ ರವರು ನಾಪತ್ತೆಯಾಗಿದ್ದಾರೆ ಎಂದು ಮಂಡ್ಯ ನಗರದ ಪಶ್ಚಿಮ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಪ್ರತಿಭಟನಾ ನಿರತ ಹೋರಾಟಗಾರರು ಮನವಿ ಸಲ್ಲಿಸಿದರು.

ಮಂಡ್ಯ ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಸಿಇಓ ನಂದಿನಿ ಹಠಾವೋ ಮಂಡ್ಯ ಜಿಲ್ಲಾ ಪಂಚಾಯಿತಿ ಬಚಾವೋ ಅಹೋ ರಾತ್ರಿ ಧರಣಿಯು ಪ್ರಾರಂಭವಾಗಿ 12 ದಿನವಾದರೂ ಆಡಳಿತಾಧಿಕಾರಿಗಳು ಧರಣಿ ಸ್ಥಳಕ್ಕೆ ಬಾರದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.
ಮಂಡ್ಯ ಜಿಲ್ಲಾ ಪಂಚಾಯತಿ ಆಡಳಿತಾಧಿಕಾರಿಗಳಾಗಿ ನೇಮಕಗೊಂಡ ದಿನದಿಂದಲೂ ಸಾರ್ವಜನಿಕರ ಭೇಟಿಗೆ ಸಿಗುತ್ತಿಲ್ಲ. ಅಲ್ಲದೆ ಆಡಳಿತ ಅಧಿಕಾರಿ ಕಚೇರಿಯು ಯಾವಾಗಲೂ ಮುಚ್ಚಿರುತ್ತದೆ ಎಂದು ದೂರಿದರು.
ಆದ್ದರಿಂದ ನಾಪತ್ತೆಯಾಗಿರುವ ಆಡಳಿತ ಅಧಿಕಾರಿಗಳನ್ನು ಪತ್ತೆ ಹಚ್ಚಿ ಕೊಡುವಂತೆ ಪ್ರತಿಭಟನಾಕಾರರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಭ್ರಷ್ಟಾಚಾರ ವಿರೋಧಿ ವೇದಿಕೆ ಉಪಾಧ್ಯಕ್ಷ ಗಾಣದಾಳು ಜೈರಾಮ್, ಆನಂದ ಕುಮಾರ್, ವೇದಮೂರ್ತಿ,ಶಿವಪ್ರಸಾದ್, ಅಮೃತಿ ಶಂಕರ್, ಚಾಮರಾಜು ಇದ್ದರು.

Leave a Reply

Your email address will not be published. Required fields are marked *

error: Content is protected !!