Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ತೆರೆದಿದ್ದ ಬೋರ್‌ವೆಲ್‌ಗೆ ಮುಚ್ಚಳ : ಎಚ್ಚೆತ್ತ ಸಾದೊಳಲು ಗ್ರಾಮ ಪಂಚಾಯಿತಿ ಅಧಿಕಾರಿಗಳು

ಜನರ ಧ್ವನಿ ವರದಿ ಫಲಶ್ರುತಿ

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸಾದೊಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾದೊಳಲು ಸರ್ಕಾರಿ ಶಾಲೆಯ ಬಳಿ  ಮುಚ್ಚಳವಿಲ್ಲದೆ ಅಪಾಯಕಾರಿಯಾಗಿ ತೆರೆದಿದ್ದ ಬೋರ್‌ವೆಲ್ ಕುರಿತು ‘ಜನರ ಧ್ವನಿ’ಯಲ್ಲಿ ದಿನಾಂಕ 10/08/2026 ರಂದು ಸಾದೊಳಲು ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ  ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡ ವರದಿಗೆ ಅಧಿಕಾರಿಗಳು ಸ್ಪಂದಿಸಿದ್ದು, ಇದೀಗ ಬೋರ್‌ವೆಲ್‌ಗೆ ಮುಚ್ಚಳ ಹಾಕಿ ಸುರಕ್ಷತಾ ಕ್ರಮ ಕೈಗೊಂಡಿದ್ದಾರೆ.
ಸಾದೊಳಲು ಗ್ರಾಮದ ಶಾಲೆಯ ಪಕ್ಕದಲ್ಲೇ ಬಹುದಿನಗಳಿಂದ ತೆರೆದ ಸ್ಥಿತಿಯಲ್ಲಿದ್ದ ಬೋರ್‌ವೆಲ್ ವಿದ್ಯಾರ್ಥಿಗಳಿಗೆ, ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ಅಪಾಯ ತಂದೊಡ್ಡುವಂತಿತ್ತು. ಈ ಕುರಿತು ಸ್ಥಳೀಯ ಸಮಸ್ಯೆಯನ್ನು ಬೆಳಕಿಗೆ ತಂದು ‘ಜನರ ಧ್ವನಿ’ ವರದಿ ಪ್ರಕಟಿಸಿತ್ತು.

ವರದಿ ಪ್ರಕಟಗೊಂಡ ಬೆನ್ನಲ್ಲೇ ಮಂಡ್ಯ ಜಿಲ್ಲಾ ಪಂಚಾಯತಿ ಸಿಇಓ ಕೆಆರ್ ನಂದಿನಿ ಅವರ ಸೂಚನೆಯ ಮೇರೆಗೆ ಸಾದೊಳಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತೆರೆದಿದ್ದ ಬೋರ್‌ವೆಲ್‌ಗೆ ಮುಚ್ಚಳ ಅಳವಡಿಸುವ ಮೂಲಕ ಅಪಾಯವನ್ನು ತಪ್ಪಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಬಳಕೆಯಲ್ಲಿಲ್ಲದ ಬೋರ್‌ವೆಲ್‌ಗಳು ಹಾಗೂ ತೆರೆದ ಗುಂಡಿಗಳು ಸಾರ್ವಜನಿಕರ ಸುರಕ್ಷತೆಗೆ ಅಪಾಯಕಾರಿಯಾಗಿದ್ದು, ಇಂತಹ ಸ್ಥಳಗಳನ್ನು ಗುರುತಿಸಿ ಶಾಶ್ವತವಾಗಿ ಮುಚ್ಚುವಂತೆ ಸಾರ್ವಜನಿಕರ ಒತ್ತಾಯವಾಗಿದೆ.

ಸಮಸ್ಯೆಯೊಂದು ನಮ್ಮ ಜನರ ಧ್ವನಿಯಲ್ಲಿ ಪ್ರಕಟಗೊಂಡು ಅಧಿಕಾರಿಗಳ ಗಮನಕ್ಕೆ ಬಂದು, ತ್ವರಿತವಾಗಿ ಕ್ರಮ ಕೈಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
———————


ಜನರ ಧ್ವನಿ ಯಲ್ಲಿ ಸಾದೊಳಲು ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ ಎಂಬ  ವರದಿ ಪ್ರಕಟಗೊಂಡಿದ್ದಕ್ಕೆ ಸಂಬಂಧಿಸಿದಂತೆ ಮೇಲಾಧಿಕಾರಿಗಳ ಸೂಚನೆಯಂತೆ ಸಾದೊಳಲು ಗ್ರಾಮದ ಸರ್ಕಾರಿ ಶಾಲೆಯ ಪಕ್ಕದಲ್ಲಿ ತೆರೆದಿದ್ದ ಬೋರ್ವೆಲ್ ಗೆ ಮುಚ್ಚಳವನ್ನು ಅಳವಡಿಸುವುದರ ಜೊತೆಗೆ ವೆಲ್ಡಿಂಗ್ ಮಾಡಿ ಭದ್ರಪಡಿಸಿ ಸುರಕ್ಷತಾ ಕ್ರಮವನ್ನು ಕೈಗೊಳ್ಳಲಾಗಿದೆ.

ಹೇಮಾ
ಪಂಚಾಯತಿ ಅಭಿವೃದ್ಧಿ ಅಧಿಕಾರಿ
ಸಾದೊಳಲು ಗ್ರಾಮ ಪಂಚಾಯಿತಿ

Leave a Reply

Your email address will not be published. Required fields are marked *

error: Content is protected !!