Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಎಸ್.ಐ ಹೊನ್ನಲಗೆರೆ ಗ್ರಾಪಂ ಬಿಲ್ ಕಲೆಕ್ಟ‌ರ್ ಅಮಾನತು

ಎಸ್.ಐ ಹೊನ್ನಲಗೆರೆ ಗ್ರಾಪಂ ಬಿಲ್ ಕಲೆಕ್ಟ‌ರ್ ಅಮಾನತು

ಮಂಡ್ಯ: ಹಣ ದುರುಪಯೋಗ, ಕರ್ತವ್ಯಲೋಪ, ಸಾರ್ವಜನಿಕ ದೂರುಗಳು, ಸಾರ್ವಜನಿಕ ಆಸ್ತಿ ನಷ್ಟ ಹಾ ಗೂ ಮೇಲಾಧಿಕಾರಿಗಳ ವಿರುದ್ಧ ಅಗೌರವವಾಗಿ ನಡೆದು ಕೊಂಡಿರುವ ಆರೋಪದ ಮೇರೆಗೆ ಮದ್ದೂರು ತಾಲೂಕಿನ ಎಸ್.ಐ.ಹೊನ್ನಲಗೆರೆ ಗ್ರಾಪಂ ಬಿಲ್‌ ಕಲೆಕ್ಟರ್‌ ಆ‌ರ್.ರಮೇಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ನೌಕರರ ವಿರುದ್ಧ ಮಾಡಿ ರುವ ಆರೋಪಗಳು ಗುರುತರವಾಗಿದ್ದು, ಮೇಲ್ನೋಟಕ್ಕೆ ಸತ್ಯವೆಂದು ಕಂಡುಬಂದಿರುವುದರಿಂದ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್‌ ಅಧಿನಿಯಮ 1993ರ ಪ್ರಕರಣ 62(ಡಿ)ರಂತೆ ಪ್ರದತ್ತವಾಗಿರುವ ಅಧಿಕಾರವನ್ನು ಚಲಾ ಯಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಿರುವುದಾಗಿ ಗ್ರಾಪಂ ಆಡಳಿತಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಅಮಾನತ್ತಾದ ನೌಕರರು ಗ್ರಾಪಂ ಅನುಮತಿ ಪಡೆಯದೆ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ. ಗ್ರಾಂಪ 886 ಗ್ರಾಪಂ 2016 ದಿನಾಂಕ 29.9.2020ರ ಪ್ರಕಾರ ಶಿಸ್ತು ಪ್ರಾಧಿಕಾರಿಯಾದ ಗ್ರಾಪಂ ಪಿಡಿಓ ನಿಯಮಾನುಸಾರ ಪರಿಶೀಲನೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!