Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಬಿ.ಹೊಸೂರು ಗ್ರಾ.ಪಂ ಅಧ್ಯಕ್ಷರಾಗಿ ಎಂ. ಎಸ್ ಶೋಭಾ ಆಯ್ಕೆ

ಮಂಡ್ಯ ತಾಲ್ಲೂಕಿನ ಬಿ.ಹೊಸೂರು ಗ್ರಾ.ಪಂ ನೂತನ ಅಧ್ಯಕ್ಷರಾಗಿ ಎಂ. ಎಸ್ ಶೋಭಾ ಅವಿರೋಧವಾಗಿ ಆಯ್ಕೆಯಾದರು.

ಹಿಂದಿನ ಅಧ್ಯಕ್ಷ ಸಿ.ಬೋರಯ್ಯ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗಧಿಯಾಗಿದ್ದು, 21 ಸದಸ್ಯರಲ್ಲಿ 14 ಜನ ಸದ್ಯಸರು ಮಾತ್ರ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.ಅಧ್ಯಕ್ಷ ಸ್ಥಾನಕ್ಕೆ  ಎಂ. ಎಸ್ ಶೋಭಾ ಹೊರತುಪಡಿಸಿ ಬೇರೆ ಯಾರು  ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಚುನಾವಣಾಧಿಕಾರಿ ಗಣೇಶ್ ಹೆಗ್ಡೆ ಅವರು ನೂತನ ಅಧ್ಯಕ್ಷರಾಗಿ ಎಂ. ಎಸ್ ಶೋಭಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಿದರು.

ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಮುಖಂಡ ಕೆಬ್ಬಳ್ಳಿ ಆನಂದ್ ಕೆಬ್ಬಳ್ಳಿ ಗ್ರಾಮದ ಶೋಭಾ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ, ಅವರು ಮುಂದಿನ ದಿನಗಳಲ್ಲಿ ಬಿ ಹೊಸೂರು ಗ್ರಾಮ ಪಂಚಾಯಿತಿಯ ಎಲ್ಲಾ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿ ಎಂದು ಆಶಿಸುತ್ತೇನೆ ಎಂದರು.

ಜೆಡಿಎಸ್ ಮುಖಂಡ ಬಿಳಿದೇಗಲು ಪ್ರತಾಪ್ ಮಾತನಾಡಿ ಒಡಂಬಡಿಕೆಯಂತೆ ಕೆಬ್ಬಳ್ಳಿ ಆನಂದ್  ಬೆಂಬಲಿತರಾದ ಶೋಭಾ ರವರನ್ನು ಆಯ್ಕೆ ಮಾಡುವಂತೆ ಹೈಕಮಾಂಡ್ ನ ಆದೇಶವಾಗಿತ್ತು, ಅದರಂತೆ ಆಯ್ಕೆ ಮಾಡಿರುವ ಎಲ್ಲ ಮುಖಂಡರಿಗೂ ಸದಸ್ಯರಿಗೂ ಧನ್ಯವಾದಗಳು ಎಂದರು.

ನೂತನ ಅಧ್ಯಕ್ಷರನ್ನು ಗ್ರಾಮ ಪಂಚಾಯತಿ ಸದಸ್ಯರುಗಳಾದ ನಿಂಗಯ್ಯ, ಗಾಯಿತ್ರಿ, ಕುಮಾರ್, ಕೃಷ್ಣೆಗೌಡ,ಸುಮಾ,ಪವಿತ್ರ, ಶಂಕರಾಚಾರಿ, ದಿವ್ಯ,ಭಾಗ್ಯಮ್ಮ, ಸಿ,ಬೋರಯ್ಯ, ದೊಡ್ಡಮ್ಮತಾಯಿ, ಸರಸ್ವತಿ, ಅನಿತಾ,ಮಹೇಶ್ ಮುಖಂಡರುಗಳಾದ ಶ್ರೀಧರ್, ಕೃಷ್ಣೆಗೌಡ, ಲಂಭೋದರ, ಮಹಾಲಿಂಗ, ಮಹೇಶ್,ಶಿವಣ್ಣ ಪಿಡಿಒ ಮಹೇಶ್, ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಎಲ್ಲಾ ಗ್ರಾಮದ ಮುಖಂಡರುಗಳು ಅಭಿನಂದಿಸಿದರು.

Leave a Reply

Your email address will not be published. Required fields are marked *

error: Content is protected !!