Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಸ್ವಾಭಿಮಾನದ ಅಮರ ಸಂಕೇತವೇ ಭೀಮಾ ಕೋರೇಗಾಂವ್ ಸಮರ – ಸುರೇಶ ಕಂಠಿ

ಮಂಡ್ಯ: ಸಮಾನತೆ ಮತ್ತು ಸ್ವಾಭಿಮಾನದ ಅಮರ ಸಂಕೇತವೇ ಭೀಮಾ ಕೋರೇಗಾಂವ್ ಸಮರ ಎಂದು ರಾಜ್ಯ ಶೋಷಿತ ಸಮುದಾಯಗಳ ವೇದಿಕೆಯ ರಾಜ್ಯಾಧ್ಯಕ್ಷ ಸುರೇಶ ಕಂಠಿ ಹೇಳಿದರು.
ಮಂಡ್ಯ ನಗರದ ಡಿ.ಸಿ ಕಚೇರಿ ಮುಂಭಾಗದ ಉದ್ಯಾವನದಲ್ಲಿರುವ ಭಾರತ ರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜೈಕಾರ ಹಾಕುವ ಮೂಲಕ ಕೋರೆಗಾವ್ ವಿಜಯೋತ್ಸವವನ್ನು ಸಂಭ್ರಮಿಸಿ ಆಚರಿಸಿದರು.
ಭೀಮಾ ಕೋರೆಗಾಂವ್ ವಿಜಯೋತ್ಸವ ಐತಿಹಾಸಿಕ ಘಟನೆಯಾಗಿದ್ದು, 30 ಸಾವಿರದಷ್ಟು ಸೈನಿಕರಿದ್ದ ಪೇಶ್ವೆಗಳನ್ನು  500 ಮಂದಿಯಿದ್ದ ಮಹರ್ ಸೈನಿಕರು 1818ರ ಜನವರಿ 1 ರಂದು ಯುದ್ಧ ಮಾಡಿ ಹೋರಾಟ ನಡೆಸಿ ಸೋಲಿಸಿದ ಮಹತ್ವದ ದಿನವೇ ಭೀಮಾ ಕೋರೆಗಾಂವ್ ವಿಜಯೋತ್ಸವ ಎಂದು ಸ್ಮರಿಸಿದರು.
ಮಹಾರ್ ಸಮುದಾಯದ ಸ್ವಾಭಿಮಾನ, ಸಮಾನತೆ ಮತ್ತು ಶೈಕ್ಷಣಿಕ ಬೆಳೆವಣಿಗೆ ಸಹಕಾರ ನೀಡದ ಪೇಶ್ವೆ ರಾಜಾಡಳಿತದ ೨ನೇ ಬಾಜಿರಾಯನ ಸೈನಿಕರೊಂದಿಗೆ ಭೀಮಾ ನದಿಯ ದಡದಲ್ಲಿನ ಕೋರೆಗಾಂವ್ ಎಂಬ ಸ್ಥಳದಲ್ಲಿ 2ನೇ ಬಾಜಿರಾಯನ ಕಾಲದಲ್ಲಿ ಆತನ ಸೈನ್ಯದ ವಿರುದ್ಧ ಸಿದ್ಧನಾಯ್ಕ ನೇತೃತ್ವದಲ್ಲಿ ಯುದ್ಧ ನಡೆದಿತ್ತು ಎಂದರು ಹೇಳಿದರು.
ಪೇಶ್ವೆಯ ಸೈನ್ಯದಲ್ಲಿದ್ದ ಆಯುಧ ಇಲ್ಲದೇ ಇದ್ದರೂ ಸಿದ್ಧನಾಯ್ಕನ ಸೈನ್ಯವು ವೀರಾವೇಶದಿಂದ ಹೋರಾಡಿ ಜಯಗಳಿಸಿತ್ತು. 22 ಜನ ಭೀಮ ಸೈನಿಕರು ವೀರಮರಣ ಹೊಂದಿದ್ದರು. ಮೂಲ ಸೌಕರ್ಯಕ್ಕಾಗಿ ಪೇಶ್ವೆಗಳ ಮತ್ತು ಅಸ್ಪೃಶ್ಯರ ನಡುವೆ ನಡೆದ ಯುದ್ಧ ಎಂದು ನೆನಪು ಮಾಡಿಕೊಂಡರು.
ಭಾರತದಲ್ಲಿ 207 ವರ್ಷಗಳ ಹಿಂದೆ ನಡೆದ ಭೀಮಾ ಕೋರೆಗಾಂವ್ ಹೋರಾಟ  ಇತಿಹಾಸವನ್ನು ಸೃಷ್ಟಿಸಿದೆ, ಅಂಬೇಡ್ಕರ್ ಅವರು ವಿದೇಶಗಳಲ್ಲಿದ್ದರೂ ಕೋರೆಗಾಂವ್ ಸ್ಮಾರಕ ಸ್ಥಂಭಕ್ಕೆ ಬಂದು ನಮನ ಸಲ್ಲಿಸುತ್ತಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ರಾಜ್ಯ ಸಂಚಾಲಕ ಆನಂದ್ ಕುಮಾರ್ , ಸಿದ್ದರಾಜು , ಸೀತಾರಾಮು , ವಿಜಯ್ ಕುಮಾರ್ , ಕುಮಾರಸ್ವಾಮಿ , ವಿ ಎಸ್ ಪ್ರಾಣೇಶ್ , ರಾಘು , ಶಿವಣ್ಣ , ಮಧು ಕುಮಾರ್ , ಆನಂದ್ ಅಹಿಂದ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!