Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಕೋಡಿದೊಡ್ಡಿಯಲ್ಲಿ ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹಿಸಿ ಬಸ್ ತಡೆದು ಪ್ರತಿಭಟನೆ

ಮಂಡ್ಯ: ಕೊಪ್ಪದಿಂದ ಮಾರಗೌಡನಹಳ್ಳಿ ಕೆರಗೊಡು ಮಾರ್ಗವಾಗಿ ಮಂಡ್ಯ ತೆರಳುವ ಬಸ್ ಅನ್ನು ಕೋಡಿದೊಡ್ಡಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ತಡೆದು ಪ್ರತಿಭಟನೆ ನಡೆಸಿದರು.

ಕೊಡಿದೊಡ್ಡಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಕೊಪ್ಪದಿಂದ ಬೆಳಿಗ್ಗೆ 8:45 ಮಂಡ್ಯ ಗೆ ಹೊರಡುವ ಬಸ್ಸು ಮುಡಲುದೊಡ್ಡಿಯ ಮೇಲೆ ತೆರೆಳುತಿತ್ತು, ಇದರಿಂದ ಕೊಡಿದೊಡ್ಡಿಯ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಕೊಡಿದೊಡ್ಡಿ ಗ್ರಾಮಸ್ಥರು ಗ್ರಾಮದಲ್ಲಿ ಬಸ್ ತಡೆದು ಮುಷ್ಕರ ನಡೆಸಿದರು.

ನಂತರ ಈ ವಿಚಾರದ ಕುರಿತು ವಾಹನ ನಿಯಂತ್ರಕ ಮಂಡ್ಯ ಡಿಪೋ ಮ್ಯಾನೇಜರ್ ಗಮನಕ್ಕೆ ತಂದರು, ಮುಂದಿನ ಸೋಮವಾರದಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಡಿಪೋ ಮ್ಯಾನೇಜರ್ ಭರವಸೆ ನೀಡಿದ್ದಾರೆ.

ಸ್ಥಳದಲ್ಲಿ ಕೊಡಿದೊಡ್ಡಿ ಗ್ರಾಮಸ್ಥರಾದ ನಾಗರಾಜು, ವಿನಯ್, ಮರಿಯಪ್ಪ , ಸತೀಶ್ ಹಾಗೂ ವಿದ್ಯಾರ್ಥಿಗಳು,ವಾಹನ ಚಾಲಕ ಮತ್ತು ವಾಹನ ನಿಯಂತ್ರಕ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!