
ಮಂಡ್ಯ ತಾಲೂಕಿನ ಚನ್ನಪ್ಪನದೊಡ್ಡಿ ಗ್ರಾಮದಲ್ಲಿ ಶ್ರೀ ಏಳೂರಮ್ಮದೇವಿ, ಶ್ರೀ ಮಾರಮ್ಮ ಶ್ರೀ ಚೌಡೇಶ್ವರಿ ದೇವರ ಪೂಜಾ ಮಹೋತ್ಸವ ಮತ್ತು ಶ್ರೀ ಅಂಕನಾಥೇಶ್ವರ ದೇವರ ಪಲ್ಲಕಿ ಉತ್ಸವದ ಹಬ್ಬವು ವಿಜೃಂಭಣೆ ಯಿಂದ ನಡೆದು, ಬಾಡೂಟ ಪರಸೆ ಸಂಪನ್ನಗೊಂಡಿತು.
ಜನರ ಧ್ವನಿ ಯೊಂದಿಗೆ ಮಾತನಾಡಿದ ಗ್ರಾಮದ ಮುಖಂಡ ಮಾಸ್ಟರ್‌ನಾಗೇಶ್, ಶ್ರೀ ಏಳೂರಮ್ಮದೇವಿ ಕುಲದ ತೆಂಡೆ ಯಜಮಾನರ ಸಮ್ಮುಖದಲ್ಲಿ ಮಾ.೨೦ರಂದು ರಾತ್ರಿ ೮.ಗಂಟೆಗೆ ಗ್ರಾಮದ ಬೀದಿ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರದೊಂದಿಗೆ ದೇವರ ಪಲ್ಲಕಿ ಉತ್ಸವ, ಪೂಜಾಕುಣಿತ ಮತ್ತು ವೀರಗಾಸೆ ಕುಣಿತವು ತಮಟೆ ನಗಾರಿ ನಾದಮೇಳದೊಂದಿಗೆ ಯಶಸ್ಸಿಯಾಗಿ ನಡೆಯಿತು ಎಂದು ಹೇಳಿದರು.
ಮಾ.21ರಂದು ಮುಂಜಾನೆ 5 ಗಂಟೆಗೆ ಮಡೆ, ತಂಬಿಟ್ಟಿನ ಆರತಿಯೊಂದಿಗೆ ಅದ್ದೂರಿ ಮೆರವಣಿಗೆಯಲ್ಲಿ ಗ್ರಾಮದೇವತೆಗಳಿಗೆ ತಂಪು ತೋರಿ, ಪೂಜೆ ಸಲ್ಲಿಸಿ ಶ್ರದ್ಧಾಭಕ್ತಿಯಿಂದ ಪ್ರಾರ್ಥಿಸಲಾಯಿತು. ಶ್ರೀ ಅಂಕನಾಥೇಶ್ವರ ದೇವರ ಪಲ್ಲಕಿ ಉತ್ಸವ ಮುಗಿದ ಬಳಿಕ ಬಾಡೂಟದ ಪರಸೆಗೆ ತಯಾರಿನಡೆಯಿತು ಎಂದು ತಿಳಿಸಿದರು.
ನಂತರ ಮಾತನಾಡಿದ ಅಂಗಡಿ ಶಿವಣ್ಣ, ನಮ್ಮ ಗ್ರಾಮದಲ್ಲಿ ದೇವರ ಉತ್ಸವವರು ೩ ವರ್ಷಗಳಿಗೊಮ್ಮ ನಡೆಯುತ್ತದೆ, ಅಕ್ಕ ಪಕ್ಕದ ಗ್ರಾಮಸ್ಥರು ಉತ್ಸವದಲ್ಲಿ ಭಾಗಿಯಾಗಿ ಸಾಮೂಹಿಕ ಬಾಡೂಟ ಪರಸೆಯಲ್ಲಿ ಪಾಲ್ಗೊಳ್ಳುವುದು ಸಂತಸವಾಗುತ್ತದೆ ಎಂದು ನುಡಿದರು.
ಇಂತಹ ದೇವರ ಉತ್ಸವದಿಂದ ಮಳೆ ಬೆಳೆ ಸಮೃದ್ಧಿಗೊಂಡು ಲೋಕಕಲ್ಯಾಣವಾಗಲಿ, ಗ್ರಾಮ ಮತ್ತಷ್ಟು ಅಭಿವೃದ್ದಿ ಕಾಣಲಿ, ಭಾವೈಕ್ಯತೆ ಹೆಚ್ಚಾಗಲಿ ಮುಂದಿನ ತಲೆಮಾರು ನೆಮ್ಮದಿ ಜೀವನ ನಡೆಸಲಿ ಎಂದು ಪ್ರಾರ್ಥಿಸಿದರು.
ಅಕ್ಕ ಪಕ್ಕದ ಗ್ರಾಮಸ್ಥರು, ಬಂಧು-ಬಳಗದವರು ನೆರೆಹೊರೆಯವರು ಸೇರಿ ಸುಮಾರು ೫ ಸಾವಿರಕ್ಕೂ ಹೆಚ್ಚು ಭಕ್ತರಿಗೆ ಬಾಡೂಟದ ಅನ್ನಂತರ್ಪಣೆ ನಡೆದಿದೆ, ಇದೆ ರೀತಿ ಮುಂದೆಯು ಸಹ ಎಲ್ಲರ ಸಹಕಾರ ಹೀಗೆ ಇರಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಯಜಮಾನರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಮಹಿಳೆಯರು ಪಾಲ್ಗೊಂಡಿದ್ದರು.

Leave a Reply