
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಶಿ ಮುರುಕನಹಳ್ಳಿ ಗ್ರಾಮದ ಬೋರಲಿಂಗೇಗೌಡ ತನ್ನ ಜಮೀನಿನಲ್ಲಿ ಸುಮಾರು 17 ಕೆ.ಜಿ ತೂಕ ಐವತ್ತು ಸಾವಿರ ಬೆಲೆ ಬಾಳುವ ಗಾಂಜಾ ಬೆಳೆದಿರುವ ಖಚಿತ ಮಾಹಿತಿ ಆಧರಿಸಿ ಮಂಡ್ಯ ಉಪ ಆಯುಕ್ತರ ಕಚೇರಿ ಉಪ ನಿರೀಕ್ಷಕ ನಾಗಭೂಷಣ್ ಹಾಗೂ ಕೆ.ಆರ್.ಪೇಟೆ ಅಬಕಾರಿ ಇನ್ಸೆಕ್ಟರ್ ದೀಪಕ್ ನೇತೃತ್ವದಲ್ಲಿ ಮಾಲ್ ಸಮೇತ ಆರೋಪಿ ಬೋರಲಿಂಗೇಗೌಡ ಬಂಧಿಸಿದ್ದಾರೆ.
ಮಂಡ್ಯ ಅಬಕಾರಿ ಉಪ ಆಯುಕ್ತ ಕಚೇರಿ ಉಪ ನಿರೀಕ್ಷರಾದ ನಾಗಭೂಷಣ್ ಮಾತನಾಡಿ ಕಾಶಿಮುರುಕನಹಳ್ಳಿ ಗ್ರಾಮದ ಬೋರಲಿಂಗೇಗೌಡ ಎಂಬ ರೈತ ತನ್ನ ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ತಾಲೂಕು ಕಂದಾಯ ಅಧಿಕಾರಿಗಳು ಜೊತೆಗೂಡಿ ನಮ್ಮ ತಂಡ ದಾಳಿಗೆ 17ಕೆ.ಜಿ ತೂಕದ ಐವತ್ತು ಸಾವಿರ ಮೌಲ್ಯದ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿ ದೇವೆ ಎಂದ ಅವರು ಪ್ರಕರಣಕ್ಕೆ ಸಂಬಂಧಿ ಸಿದಂತೆ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ (ಎನ್ಡಿಪಿಎಸ್) ಅಡಿಯಲ್ಲಿ ಕೆ.ಆರ್.ಪೇಟೆ ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಬೋರಲಿಂಗೇಗೌಡರನ್ನ ಬಂಧಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬೂಕನಕೆರೆ ಹೋಬಳಿ ರಾಜಶ್ವನೀರಕ್ಷಕಿ ಚಂದ್ರಕಲಾ, ಅಬಕಾರಿ ಹೆಡ್ ಕಾನ್ಸ್ ಟೇಬಲ್ ಅನಿಲ್ ಕುಮಾರ್, ದಿನೇಶ್, ಎಂ ಎಸ್. ಪೇದೆಗಳಾದ ಗಂಗಾಧರ್ ಸಿ.ಯು, ಚಂದ್ರ ಶೇಖರ, ನಾಗಪ್ಪ,ಸಂತೋಷ ಕುಮಾರ್, ಜಮೀರ್ ಸೇರಿದಂತೆ ಇತರರಿದ್ದರು.

Leave a Reply