Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಸರ್ಕಾರಿ ಗೋಮಾಳ ಜಮೀನಿಗೆ ಇ-ಸ್ವತ್ತು ವಿತರಣೆ ; ಇಬ್ಬರು ಪಿಡಿಓ ಸಸ್ಪೆಂಡ್

ಗೋಮಾಳ ಜಮೀನನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ ಅಕ್ರಮ ಖಾತೆ ಮಾಡಿದ್ದಲ್ಲದೆ ಅದಕ್ಕೆ
ಇ-ಸ್ವತ್ತು ವಿತರಿಸಿ ಕರ್ತವ್ಯಲೋಪವೆಸಗಿದ ಆರೋಪದ ಮೇಲೆ ಉಪ ಲೋಕಾಯುಕ್ತರ ಸೂಚನೆಯಂತೆ
ಇಬ್ಬರು ಪಿಡಿಒಗಳನ್ನು ಜಿಪಂ ಸಿಇಒ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಇಂಡವಾಳು ಗ್ರಾಪಂ ಪಿಡಿಒ ಕೆ.ಸಿ.ಯೋಗೇಶ್ ಹಾಗೂ ಹಿಂದೆ ಇದೇ ಪಂಚಾಯಿತಿ ಪಿಡಿಓ ಆಗಿದ್ದ
ಶ್ರೀರಂಗಪಟ್ಟಣ ತಾಲೂಕು ಮುಂಡುಗದೊರೆ ಪಿಡಿಒ ಹೆಚ್‌.ಬಿ.ವಿಶಾಲಮೂರ್ತಿ ಅಮಾನತಾಗಿರುವ
ಪಿಡಿಒಗಳಾಗಿದ್ದಾರೆ.

ಉಪಲೋಕಾಯುಕ್ತ ಬಿ.ವೀರಪ್ಪ ಇಂಡುವಾಳು ಗ್ರಾಪಂಗೆ ಭೇಟಿ ನೀಡಿದಾಗ ಹಲವು ನ್ಯೂನ್ಯತೆಗಳು
ಕಂಡು ಬಂದಿರುವ ಹಿನ್ನೆಲೆಯಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ ಈ ಇಬ್ಬರು
ಪಿಡಿಒಗಳನ್ನು ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.

ವಿಶಾಲಮೂರ್ತಿ ಎಂಬುವವರು ಈ ಹಿಂದೆ
ಇಂಡುವಾಳು ಗ್ರಾ.ಪಂನಲ್ಲಿ ಪಿಡಿಒಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಈ ಹಿಂದೆ ಇದ್ದ ವಿಶಾಲಮೂರ್ತಿ ಇಂಡುವಾಳು ಗ್ರಾ.ಪಂ ಯ ಸರ್ವೇ ನಂಬರ್ 26 ರಲ್ಲಿ
ನಿಯಮ ಬಾಹಿರವಾಗಿ ಖಾತೆ ಮಾಡಿರುವುದನ್ನು ಪರಿಶೀಲಿಸದೆ, ಖಾಸಗಿ ಸಿವಿಲ್ ಇಂಜಿನಿಯರ್ ಅವರಿಂದ ಕಟ್ಟಡ ನಕ್ಷೆ ಪಡೆದು ಅನುಮೋದಿಸಿದ್ದ ಯೋಗೇಶ್ ಈ ಇಬ್ಬರನ್ನು ಅಮಾನತ್ತುಗೊಳಿಸಿ ಆದೇಶಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!