Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಭೂತನ ಹೊಸೂರು ಶಾಲೆಯ ವಿದ್ಯಾರ್ಥಿಗಳು ಇನ್ಸ್ಪೈರ್ ಅವಾರ್ಡ್ ಗೆ ಆಯ್ಕೆ

ಶಾಲಾ ಹಂತದ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ನಾವಿನ್ಯಯುತ ಆವಿಷ್ಕಾರಗಳು ಮತ್ತು ಅನ್ವೇಷಣೆಗಳನ್ನು ಪ್ರೋತ್ಸಾಹಿಸುವ ಇನ್ಸ್ಪೈರ್ ಅವಾರ್ಡ್ ಗೆ ಮಂಡ್ಯ ತಾಲ್ಲೂಕಿನ ಭೂತನಹೊಸೂರು ಗ್ರಾಮದ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಾಯೋಜಿತ ಕಾರ್ಯಕ್ರಮವಾದ ಇನ್ಸ್ಪೈರ್ ಅವಾರ್ಡ್ ನಲ್ಲಿ  ಮಂಡ್ಯ ಜಿಲ್ಲಾ ಹಂತದಲ್ಲಿ ಭಾಗವಹಿಸಿದ್ದ  ಭೂತನಹೊಸೂರು ಸರ್ಕಾರಿ ಶಾಲೆಯ ಪುನೀತ್‌ ರಾಜ್ ಆರ್ (ಏಳನೇ ತರಗತಿ), ತನ್ವಿತಾ ಬಿ ಎಂ (6ನೇ ತರಗತಿ) ಮತ್ತು ಭವಿಷ್ ಗೌಡ ಬಿ ಎಲ್ (ಆರನೇ ತರಗತಿ) ಆಯ್ಕೆ ಆಗಿರುವುದು ಪ್ರಶಂಸನೀಯವಾಗಿದೆ.

ಇದೇ ಶಾಲೆಯ ಪುನೀತ್ ರಾಜ್ ಆರ್ (7ನೇ ತರಗತಿ) ಎಂಬ ವಿದ್ಯಾರ್ಥಿಯು ಪ್ರತಿಭಾ ಕಾರಂಜಿಯಲ್ಲಿ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಮಂಡ್ಯ ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ಈ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಮುಖ್ಯ ಶಿಕ್ಷಕರಾದ ತೆರೇಸಾ ಮಿನೇಜಸ್, ಸಹ ಶಿಕ್ಷಕರಾದ ಸುಮಿತ್ರ ಡಿ ಕೆ, ವನಜಾಕ್ಷಿ, ಪ್ರೀತಿ ಆರ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಮಂಡ್ಯ ಜಿಲ್ಲಾಧ್ಯಕ್ಷ ಹೆಚ್.ಡಿ.ಜಯರಾಂ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!