Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಸರ್ಕಾರ, ಸಿಇಓ ಆದೇಶಗಳಿಗೆ ಬೆಲೆ ಕೊಡದ ಅಧಿಕಾರಿಗಳು

ವರದಿ : ಎಂ.ಚಾಮರಾಜು

ಮಂಡ್ಯ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರಿಗೆ ಸಿಗದೇ ತೊಂದರೆಯಾಗುತ್ತಿರುವ ಬಗ್ಗೆ ಹಲವು ದೂರುಗಳು ವರದಿಯಾಗುತ್ತಿದ್ದು, ಸರ್ಕಾರದ,ಜಿಲ್ಲಾ ಪಂಚಾಯತಿ ಸಿಇಓ ರವರ ಆದೇಶಕ್ಕೆ ( ಬೆಲೆ ) ಕಿಮ್ಮತ್ತಿಲ್ಲದಂತಾಗಿದೆ

ಗ್ರಾಮ ಪಂಚಾಯಿತಿಯ ಎಲ್ಲಾ ಸರ್ಕಾರಿ ಸಿಬ್ಬಂದಿಗಳು ದಿನಕ್ಕೆ ಎರಡು ಬಾರಿ ಬಯೋಮೆಟ್ರಿಕ್  ಹಾಜರಾತಿ ನೀಡುವುದು ಕಡ್ಡಾಯವಾಗಿರುತ್ತದೆ.ಆದರೆ ಬಯೋಮೆಟ್ರಿಕ್ ವರದಿಗಳನ್ನು ಗಮನಿಸಿದಾಗ ಬಹಳಷ್ಟು ಸರ್ಕಾರಿ ಸಿಬ್ಬಂದಿಗಳು ವಿಳಂಬವಾಗಿ ಕಚೇರಿಗೆ ಆಗಮಿಸುವುದು ಮತ್ತು ಎರಡನೇ ಬಾರಿ ಬಯೋಮೆಟ್ರಿಕ್ ಹಾಜರಾತಿ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುವ ಪಿಡಿಒ, ಕಾರ್ಯದರ್ಶಿ, ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳು ಕೇಂದ್ರ ಸ್ಥಾನದಲ್ಲಿ ವಾಸ ಇರಬೇಕೆಂಬ ಸರಕಾರದ ಆದೇಶಕ್ಕೆ ಕಿಮ್ಮತ್ತಿಲ್ಲ, ಗ್ರಾಮ ಪಂಚಾಯಿತಿ ಅಧಿಕಾರಿಗಳು ವಾಸವಿರದ ಬಗ್ಗೆ ಪ್ರಶ್ನಿಸಬೇಕಾದ ಜಿಲ್ಲಾ, ತಾಲೂಕು ಪಂಚಾಯತಿ, ಸೇರಿದಂತೆ ವಿವಿಧ ಇಲಾಖೆಯ  ಹಲವು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸವಿರದೇ  ಬೆಂಗಳೂರು-  ಮೈಸೂರು ಸೇರಿದಂತೆ  ಹಲವು ಕಡೆಗಳಿಂದ ಕಚೇರಿಗಳಿಗೆ ಬಂದು ಹೋಗುತ್ತಿದ್ದಾರೆ.
( ಬೆಳಗಿನ ಸಂದರ್ಭದಲ್ಲಿ ರೈಲ್ವೆ ನಿಲ್ದಾಣ ಬಸ್ ನಿಲ್ದಾಣಗಳ ಬಳಿ ಗಮನಿಸಿದರೆ ಈ ಬಗ್ಗೆ ಗೊತ್ತಾಗುತ್ತದೆ )

ಕೆಲವು ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿಗದಿತ ಅವಧಿಗೆ ಬಯೋಮೆಟ್ರಿಕ್ ಹಾಜರಾತಿ ನೀಡಿ ಕಚೇರಿಯಿಂದ ಹೊರಟರೆ, ಯಾವಾಗ ಮತ್ತೆ ಕಚೇರಿಗೆ ಬರುತ್ತರೋ ಯಾರಿಗೂ ಗೊತ್ತಿರುವುದಿಲ್ಲ, ಯಾರಾದರೂ ಕೇಳಿದರೆ, ಫೀಲ್ಡ್ ವರ್ಕ್ ನಲ್ಲಿದ್ದೇನೆ, ತಾಲೂಕು ಪಂಚಾಯತಿ ಕಚೇರಿಗೆ ಹೋಗಿದ್ದೇನೆ, ಎಂಬ ಹಲವು ಕಾರಣಗಳ ಉತ್ತರಗಳು ಸಿಗುತ್ತವೆ.
ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು  ಜಿಲ್ಲಾ, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ, ಆದರೆ ಕೆಲವು ಬಡ ಅಧಿಕಾರಿಗಳ ವಿರುದ್ಧ ಮಾತ್ರ ಇವರ ಅಧಿಕಾರ ಚಲಾಯಿಸಲು ಮುಂದಾಗುತ್ತಾರೆ.
ತಡವಾಗಿ ಹೋಗುವ ಅಧಿಕಾರಿಗಳು ಇಲ್ಲಸಲ್ಲದ ಸಬೂಬುಗಳನ್ನು ಬಯೋಮೆಟ್ರಿಕ್ ಹಾಜರಾತಿ ನೀಡುವ ಸಂದರ್ಭದಲ್ಲಿ ದಾಖಲಿಸುವುದನ್ನು ನೋಡಿದರೆ ಎಂತವರಿಗೂ ನಗು ಬರುತ್ತದೆ.  ತಡವಾಗಿ ಹೋಗಿದ್ದಕ್ಕೆ ಇಂಟರ್ನೆಟ್ ಸಮಸ್ಯೆ, ಫೀಲ್ಡ್ ವರ್ಕ್ ಹೋಗಿದ್ದೆ, ತಾಲೂಕು ಪಂಚಾಯಿತಿ ಕಚೇರಿಗೆ ಹೋಗಿದ್ದೆ, ವಕೀಲರನ್ನು ನೋಡಲು ಹೋಗಿದ್ದೆ, ಎಂಬ ಮಾಹಿತಿಗಳನ್ನು ನೀಡುತ್ತಾ ಇದ್ದಾರೆ.
ಸರ್ಕಾರವು ಕಚೇರಿಗೆ ತೆರಳಿ ಬಯೋಮೆಟ್ರಿಕ್ ಹಾಜರಾತಿ ನೀಡಿದ ನಂತರ ವಿವಿಧ ಕೆಲಸಗಳಿಗೆ ಕರ್ಚೆರಿಯಿಂದ ಹೊರ ಹೋಗಬೇಕಾದರೆ, ಕಚೇರಿಯ ಚಲನವಲನ ಪುಸ್ತಕದಲ್ಲಿ ನಮೂದಿಸಿ ಹೋಗಬೇಕೆಂದು ಹಲವು ಆದೇಶಗಳನ್ನು ಮಾಡಿದ್ದರು ಸಹ ಅಧಿಕಾರಿಗಳು ಸರ್ಕಾರದ ಆದೇಶಕ್ಕೆ ಕಿಮ್ಮತ್ತು ನೀಡುತ್ತಿಲ್ಲ.
ತಾಲೂಕು ಪಂಚಾಯಿತಿಗಳ ಕೆಲವು ಇಓಗಳೇ ತಡವಾಗಿ ಕಚೇರಿಗೆ  ಹೋಗುವ ಅಧಿಕಾರಿಗಳ ವಿರುದ್ಧ ಕೆಸಿಎಸ್ಆರ್ ನಿಯಮದಂತೆ ಕ್ರಮ ಜರುಗಿಸದೆ ರಕ್ಷಣೆಗೆ ನಿಂತಿದ್ದಾರೆ ಎಂಬ ಆರೋಪವೂ ಇದೆ. ( ಮಾಹಿತಿ ಹಕ್ಕಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಹೊಂದಿರುವ ದಾಖಲೆಗಳ ಸಹಿತ ಮಾಹಿತಿ ಕೋರಿದರೂ ಸಹ ಕೆಲವು ಇಓ ಗಳೇ ಮಾಹಿತಿಯನ್ನು ಕೊಡುತ್ತಿಲ್ಲವಂತೆ )
ಸರ್ಕಾರದ ಆದೇಶದಂತೆ 10:10 ರ ಒಳಗೆ ಕಚೇರಿಗೆ ಹೋಗಲೇಬೇಕು. ಆದರೆ ಅನಧಿಕೃತವಾಗಿ 10:30 ರವರೆಗೆ ಹೋಗಲು ಜಿಲ್ಲಾ,ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಸಮಯವನ್ನು ನೀಡುತ್ತಿದ್ದಾರೆ. ಆದರೂ ಆ ಸಮಯಕ್ಕೂ ಕೆಲವು ಅಧಿಕಾರಿಗಳು ಹೋಗುತ್ತಿಲ್ಲ ಎಂಬ ಆರೋಪವು ಇದೆ.

ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಅಧಿಕಾರಿಗಳು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಅನಾವಶ್ಯಕವಾಗಿ ವಾರದಲ್ಲಿ ಎರಡು ಮೂರು ದಿನ  ಸಭೆಗಳಿಗೆ ಖುದ್ದು ಹಾಜರಾಗುವಂತೆ ಆದೇಶ ಮಾಡುತ್ತಿದ್ದಾರೆ ಎಂಬ ಆರೋಪವು  ಸಹ ಕೇಳಿಬರುತ್ತಿದೆ.

ಇನ್ನು ಸರ್ಕಾರ ನೀಡಿರುವ  ಮೊಬೈಲ್ ಸಿಮ್ ಗಳನ್ನು ಬಳಸದಿರುವ ಬಗ್ಗೆ ಹಲವು ಹೋರಾಟಗಾರರು ದೂರು ನೀಡಿದ್ದರೂ ಸಹ ಇದುವರೆಗೂ ಜಿಲ್ಲಾ ಪಂಚಾಯತಿ ಅಧಿಕಾರಿಗಳಾಗಲಿ, ತಾಲೂಕು ಪಂಚಾಯಿತಿ ಅಧಿಕಾರಿಗಳಾಗಲಿ ಯಾವುದೇ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದೆ ನಿರ್ಲಕ್ಷ ತೋರುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ.

ಇಂದಿನ ಡಿಜಿಟಲ್ ಯುಗದಲ್ಲಿಯೂ ಮಂಡ್ಯ ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿಗಳು ಡಿಜಿಟಲೀಕರಣಕ್ಕೆ ಒತ್ತು ನೀಡದೆ ನಿರ್ಲಕ್ಷ ತೋರಿವೆ. ಸರ್ಕಾರದ ಲೆಕ್ಕಾಚಾರದಲ್ಲಿ ಗ್ರಾಮ ಪಂಚಾಯಿತಿಗಳು ಡಿಜಿಟಲಿಕರಣವಾಗಿವೆ. ಮಂಡ್ಯ ಜಿಲ್ಲೆಯ ಗ್ರಾಮ ಪಂಚಾಯತಿಗಳು ಸ್ವತಹ ವೆಬ್ ಸೈಟ್ ಮಾಡಿ ಸಾರ್ವಜನಿಕರಿಗೆ ಎಲ್ಲಾ ಮಾಹಿತಿಗಳನ್ನು ನೀಡಲು ವಿಫಲವಾಗಿವೆ. ( ಹಿಂದೆ ಸರ್ಕಾರದ ಆದೇಶದಂತೆ ರಚನೆಯಾಗಿದ್ದ ವೆಬ್ ಸೈಟ್ ಗಳನ್ನು  ಗ್ರಾಮ ಪಂಚಾಯಿತಿಗಳು ಸರಿಯಾಗಿ ನಿರ್ವಹಣೆ ಮಾಡಲಿಲ್ಲ )

ಮಂಡ್ಯ ಜಿಲ್ಲೆಯ ಹಲವು ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನೇ ಅಳವಡಿಸಿಕೊಂಡಿಲ್ಲವಂತೆ, ಗ್ರಾಮ ಪಂಚಾಯಿತಿಯ ಸಿಸಿಟಿವಿ ಕ್ಯಾಮೆರಾಗಳನ್ನು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕಚೇರಿಗಳಲ್ಲಿ ಮೇಲ್ವಿಚಾರಣೆ ಮಾಡುವುದರ ಮೂಲಕ ಆಡಳಿತದಲ್ಲಿ ಸುಧಾರಣೆ ತರಬೇಕೆಂಬ ನಿಯಮವಿದ್ದರೂ, ಇದುವರೆಗೂ ಜಾರಿಗೆ ಬಂದಂತೆ ಕಾಣುತ್ತಿಲ್ಲ.

ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು  ಈ ಬಗ್ಗೆ ಕೂಡಲೇ ಗಮನಹರಿಸಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತೆ ಹಾಗೂ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗುವವರೇ ಎಂಬುದನ್ನು ಕಾದು ನೋಡಬೇಕಾಗಿದೆ….??

Leave a Reply

Your email address will not be published. Required fields are marked *

error: Content is protected !!