
ಮಂಡ್ಯ: ಸಾರ್ವಜನಿಕರಿಗೆ ನಿಗದಿತ ಅವಧಿಯಲ್ಲಿ ಸೇವೆ ಸಲ್ಲಿಸಲು ಕಂಪ್ಯೂಟರ್ ಡೇಟಾ ಎಂಟ್ರಿ ಸಹಾಯಕರ ಸೇವೆ ಅಪಾರವಾಗಿದೆ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪಿ.ಲಕ್ಷ್ಮಿ ತಿಳಿಸಿದರು
ಮಂಡ್ಯ ತಾಲ್ಲೂಕು ಪಂಚಾಯತ್ ಸಾಮರ್ಥ್ಯ ಸೌಧದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ಕ್ಲರ್ಕ್ ಕಂ ಟಾಟಾ ಆಪರೇಟರ್ಗಳ ಕ್ಷೇಮಾಭಿವೃದ್ಧಿ ಸಂಘ, ಮಂಡ್ಯ ತಾಲ್ಲೂಕು ಘಟಕ ಹಾಗೂ ತಾಲ್ಲೂಕು ಪಂಚಾಯತ್ ಮಂಡ್ಯ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕಂಪ್ಯೂಟರ್ ಪಿತಾಮಹ ಚಾಲ್ರ್ಸ್ ಬ್ಯಾಬೇಜ್‌ರವರ ಜನ್ಮದಿನದ ಪ್ರಯುಕ್ತ ಕಂಪ್ಯೂಟರ್ ಆಪರೇಟರ್ ದಿನ ಮತ್ತು ಸಂಘದ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡುವ ಡೇಟಾ ಎಂಟ್ರಿ ಆಪರೇಟರ್‌ಗಳ ಕೊಡುಗೆಯನ್ನು ಗುರುತಿಸಲು ಈ ದಿನವನ್ನು ಮೀಸಲಿಡಲಾಗಿದೆ. ಸದ್ಯ ಎಲ್ಲ ಸೇವೆಗಳು ಗಣಕೀಕೃತವಾಗಿದ್ದು, ಗ್ರಾಪಂ ಹಂತದಲ್ಲಿ ಕಂಪ್ಯೂಟರ್ ಆಪರೇಟರ್‌ಗಳು ಸಾಕಷ್ಟು ಶ್ರಮವಹಿಸಿ ದುಡಿಯುತ್ತಿದ್ದು,ಅವರ ಸೇವೆ ಶ್ಲಾಘನೀಯ ಎಂದು ಹೇಳಿದರು.
ಕಂಪ್ಯೂಟರ್ ಪಿತಾಮಹ ಚಾಲ್ರ್ಸ್ ಬ್ಯಾಬೇಜ್ ಅವರ ಜನ್ಮ ದಿನವನ್ನು ಕಂಪ್ಯೂಟರ್ ಆಪರೇಟರ್‌ಗಳ ದಿನವಾಗಿ ಆಚರಿಸಲಾಗುತ್ತಿದೆ. ಎಲ್ಲ ಕೆಲಸಗಳು ಬಹುಪಾಲು ಕಂಪ್ಯೂಟರ್ ಅನ್ನೆ ಅವಲಂಬಿಸಿದ್ದು, ಕ್ಷಣಾರ್ಧದಲ್ಲಿ ನಮಗೆ ಜಗತ್ತಿನ ಮಾಹಿತಿ ದೊರೆಯುತ್ತಿದೆ.ಗ್ರಾಪಂನ ಎಲ್ಲ ಸೇವೆಗಳು ಆನ್‌ಲೈನ್ ಆಗಿದ್ದು,ಅವುಗಳನ್ನು ಆಪರೇಟರ್‌ಗಳು ನಿರ್ವಹಿಸಿ.ಸಕಾಲದಲ್ಲಿ ಜನರಿಗೆ ಸೇವೆ ನೀಡುತ್ತಿದ್ದಾರೆ. ಮೊದಲು ಬರವಣಿಗೆ ರೂಪದಲ್ಲಿ ದಾಖಲೆಗಳಿರುತ್ತಿದ್ದವು.ಈಗ ಎಲ್ಲವೂ ಆನ್‌ಲೈನ್ ಆಗಿವೆ.ಜನರಿಗೆ ನಿಮ್ಮ ಸೇವೆ ಅತ್ಯವಶ್ಯವಿದ್ದು, ಉತ್ತಮವಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ತಾಪಂ ಇಒ ಲೋಕೇಶ್ ಮೂರ್ತಿ ಮಾತನಾಡಿ ಚಾಲ್ರ್ಸ್ ಬ್ಯಾಬೇಜ್ ಸಂಶೋಧನೆ ಇಂದು ಜಗತ್ತಿಗೆ ಉಪಯೋಗವಾಗುತ್ತಿದೆ. ಗಣಕಯಂತ್ರ ನಿರ್ವಾಹಕರು ಉತ್ತಮವಾಗಿ ಕೆಲಸ ಮಾಡುವುದರಿಂದ ಯೋಜನೆಗಳ ಪ್ರಗತಿ ಸಾಗುತ್ತಿದೆ.ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಂಡು ಕೆಲಸ ನಿರ್ವಹಿಸಿದಲ್ಲಿ ಇನ್ನಷ್ಟು ಪ್ರಗತಿ ಕಾಣಬಹುದು ಎಂದರು.
ಇದೇ ಸಂದರ್ಭದಲ್ಲಿ ಮಂಡ್ಯ ತಾಲ್ಲೂಕು ಗ್ರಾಮ ಪಂಚಾಯತ್ ಕ್ಲರ್ಕ್ ಕಂ ಡಿಇಓಗಳ ಕ್ಷೇಮಾಭಿವೃದ್ಧಿ ಸಂಘ ಹೊರ ತಂದಿರುವ 2026 ರ ನೂತನ ವರ್ಷದ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಮೇನಕಾದೇವಿ, ಬಿ.ವಿ.ಶ್ರೀಧರ್, ಪಿಡಿಓಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಸುರೇಶ್, ಪಿಡಿಓಗಳ ಸಂಘದ ಪದಾಧಿಕಾರಿಗಳಾದ ವಿನಯ್‌ಕುಮಾರ್, ಸುನಿಲ್ ಕುಮಾರ್, ಬಿ.ಆರ್.ಹರೀಶ್, ಡಿಇಓಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಎಸ್.ಮಂಜುನಾಥ್, ಉಪಾಧ್ಯಕ್ಷೆ ವಿಜಯಕುಮಾರಿ, ಪದಾಧಿಕಾರಿಗಳಾದ ಬಿ.ಎಂ. ಸಿದ್ದಪ್ಪಾಜಿ,ಸಂತೋಷ್ ಕುಮಾರ್, ವಿಜಯ್ ಕುಮಾರ್, ಗ್ರಾಮ ಪಂಚಾಯಿತಿ ಪಿಡಿಒಗಳು, ಕಾರ್ಯದರ್ಶಿಗಳು, ಸಿಬ್ಬಂದಿಗಳು ಹಾಜರಿದ್ದರು

Leave a Reply