Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಹುಲಿಕೆರೆ ಗ್ರಾ.ಪಂನ ಬಿಲ್ ಕಲೆಕ್ಟರ್ ಹೇಮಂತ್ ನೇಮಕ ರದ್ದು ಆದೇಶ


ಮಂಡ್ಯ: ಅಕ್ರಮ ನೇಮಕಾತಿ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲೂಕು ಹುಲಿಕೆರೆ ಗ್ರಾಪಂ ಬಿಲ್ ಕಲೆಕ್ಟರ್‌ಎನ್.ವಿ.ಹೇಮಂತ್‌ಕುಮಾರ್‌ನೇಮಕಾತಿಯನ್ನು ರದ್ದುಗೊಳಿಸಿ ಜಿಪಂ ಸಿಇಓಕೆ.ಆ‌ರ್.ನಂದಿನಿ ಆದೇಶ ಹೊರಡಿಸಿದ್ದಾರೆ. ಹೇಮಂತ್ಕುಮಾರ್‌ ಅಕ್ರಮ ನೇಮಕಾತಿ ಸಂಬಂಧ ದೂರಿನ ಬಗ್ಗೆ ವಿಶೇಷ ತನಿಖಾ ತಂಡ ರಚಿಸಿ ತನಿಖೆಗೊಳಪಡಿಸಿದಾಗ ಸ್ಥಳೀಯ ಅಭ್ಯರ್ಥಿಗೆ ಪ್ರಥಮ ಆದ್ಯತೆ ನೀಡುವ ವಿಷಯವನ್ನು ಮರೆಮಾಚಿರುವುದು. ಅರ್ಜಿಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಆಡಳಿತ ಮಂಡಳಿಯ ಗಮನಕ್ಕೆ ತರದಿರುವುದು. ದ್ವಿತೀಯ ಪಿಯುಸಿಯಲ್ಲಿಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಯನ್ನು ನಿಯಮಬಾಹೀರವಾಗಿ ಆಯ್ಕೆ ಮಾಡಿರುವುದು ವರದಿಯಿಂದ ಕಂಡುಬಂದಿದೆ. ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದು ನೇಮಕಾತಿ ಪ್ರಕ್ರಿಯೆಯಲ್ಲಿ ಲೋಪವಾಗಿದ್ದರೂ ಅದನ್ನು ಪರಿಶೀಲಿಸದೆ ಎನ್.ವಿ.ಹೇಮಂತ್‌ಕುಮಾರ್‌ ಅವರನ್ನು ಬಿಲ್ ಕಲೆಕ್ಟರ್‌ ಹುದ್ದೆಗೆ ಅನುಮೋದನೆ ನೀಡಿ ಪ್ರಸ್ತಾವನೆಯನ್ನು ತಾಪಂ ಕಚೇರಿಗೆ ಸಲ್ಲಿಸಿ ತಾಪಂ ಕಚೇರಿ ಶಿಫಾರಸು ಆಧಾರದ ಮೇಲೆ ಜಿ.ಪಂನಿಂದ ನಿಯಮಬಾಹೀರವಾಗಿ ಪಡೆದಿರುವುದು ದೃಢಪಟ್ಟಿದೆ. ಬಿಲ್ ಕಲೆಕ್ಟರ್ ಹುದ್ದೆಗೆ ಹೇಮಂತ್‌ಕುಮಾರ್‌ ಹೆಸರನ್ನು ಅನುಮೋದನೆ ನೀಡುವಾಗ ಪಿಡಿಓ, ತಾಪಂ ಇಓ, ತಾಪಂನಿಂದ ದೃಢೀಕರಿಸಿ ಸಲ್ಲಿಸಿರುವ ದಾಖಲೆಗಳು ಹಾಗೂ ಮಾಹಿತಿಗಳು ಸುಳ್ಳಾಗಿರುವುದರಿಂದ ಯಾವುದೇ ಮುನ್ಸೂಚನೆ ನೀಡದೆ ಅನುಮೋದನೆಯನ್ನು ರದ್ದುಪಡಿಸಿರುವುದಾಗಿ ತಿಳಿಸಲಾಗಿದೆ. ಕೂಡಲೇ ಹೇಮಂತ್‌ಕುಮಾರ್‌ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಕ್ರಮ ಕೈಗೊಳ್ಳುವಂತೆ ಗ್ರಾಪಂ ಪಿಡಿಒ ಅವರಿಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!