Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಇಂಡುವಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶೈಲಜಾ ಸೋಮಶೇಖರ್ ಆಯ್ಕೆ

ಮಂಡ್ಯ ತಾಲೂಕಿನ ಇಂಡವಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ಸುಂಡಹಳ್ಳಿ ಶೈಲಜಾ ಸೋಮಶೇಖರ್  ಅವಿರೋಧವಾಗಿ ಆಯ್ಕೆಯಾದರು.

ನಿಕಟಪೂರ್ವ ಅಧ್ಯಕ್ಷೆ ತನುಜಾ ಅವರ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಶೈಲಜಾ ಸೋಮಶೇಖರ್ ಹೊರತು ಪಡಿಸಿ  ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಶೈಲಜಾ ಸೋಮಶೇಖರ್ ಅವರು ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಹಾಗೂ ತಾ.ಪಂ.ಇಓ ಲೋಕೇಶ್ ಘೋಷಣೆ ಮಾಡಿದರು.

ನೂತನ ಅಧ್ಯಕ್ಷೆ ಸುಂಡಹಳ್ಳಿ ಶೈಲಜಾ ಸೋಮಶೇಖರ್ ಮಾತನಾಡಿ, ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 19 ಮಂದಿ ಸದಸ್ಯರಿದ್ದು, ಎಲ್ಲರ ಸಹಕಾರ ಮತ್ತು ಒಗ್ಗಟ್ಟಿನಿಂದ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ ಎಂದು ನುಡಿದರು.
ಉಳಿದ ಅವಧಿಯಲ್ಲಿ ಎಲ್ಲಾ ಸದಸ್ಯರ ಸಹಕಾರ ಮತ್ತು ಅಧಿಕಾರಿಗಳ ಮಾರ್ಗದರ್ಶನದಲ್ಲಿ ಗ್ರಾಮಗಳ ಅಭಿವೃದ್ದಿ ಮತ್ತು ಪಂಚಾಯತ್ ಇಲಾಖೆ ನೀಡುವ ಎಲ್ಲಾ ಯೋಜನೆಗಳನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸುತ್ತೇವೆ  ಎಂದು ಹೇಳಿದರು.
ಈ ಸಂದರ್ಭದಲ್ಲಿ  ಗ್ರಾಮ ಪಂಚಾಯಿತಿ ಸದಸ್ಯರಾದ ಚನ್ನಾಚಾರಿ, ಜಿ.ಪಿ.ತೇಜಾ, ತನುಜಾ, ರಮೇಶ್, ಎಸ್.ತನುಜಾ, ಸತೀಶ್, ಸ್ವಾಮಿ, ಮಮತಾ, ಚಲುವರಾಜು, ಅಭಿಲಾಷ್, ಚಿಕ್ಕಯ್ಯ, ರೇಖಾ ಪಾಲ್ಗೊಂಡಿದ್ದರು. ಸೋಮಶೇಖರ್ ಅಭಿನಂದಿಸಿದರು.
ಈ ಸಂದರ್ಭದಲ್ಲಿ  ಮುಖಂಡರಾದ ಸುಂಡಹಳ್ಳಿ ಸೋಮಶೇಖರ್, ಬಿಳಿದೇಗುಲು ಜಗದೀಶ್, ತ್ರಿಲೋಕ್‌ಗೌಡಪ್ಪ, ರಘು, ಹೊಳಲುಶ್ರೀನಿವಾಸ್, ಪ್ರಸನ್ನ, ಪಟೇಲ್ ಪುಟ್ಟಸ್ವಾಮಿ, ಸುಂದರ್,  ಸುಂಡಹಳ್ಳಿ ಸಿದ್ದರಾಜು, ಶಿವಸ್ವಾಮಿ, ಪ್ರಭಾಕರ್ , ಪತ್ರಕರ್ತ ಎಂ.ಶಿವಕುಮಾರ್ ಪಿಡಿಓ ಸ್ವಾಮಿ, ಕಾರ್ಯದರ್ಶಿ ಮರಿಲಿಂಗಯ್ಯ,ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!