
ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಮನ್ ಮುಲ್ ನಿರ್ದೇಶಕ ಹಾಗೂ ಜೆಡಿಎಸ್ ಮುಖಂಡ ಬಿ.ಆರ್ ರಾಮಚಂದ್ರು ರವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಮತ್ತು ಜೆಡಿಎಸ್,ಬಿಜೆಪಿ ಪಕ್ಷದ ಕಾರ್ಯಕರ್ತರು ಸೇರಿ ಆಚರಿಸಿದರು,
ಕೆರಗೋಡು ಗ್ರಾಮಕ್ಕೆ ಆಗಮಿಸಿದ ಬಿಆರ್ ರಾಮಚಂದ್ರ ರವರನ್ನು ಗ್ರಾಮದ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಿಂದ ಎತ್ತಿನಗಾಡಿಯಲ್ಲಿ ಮೆರವಣಿಗೆಯ ಮೂಲಕ ವೇದಿಕೆಗೆ ಕರೆ ತಂದರು.
ಜೆಡಿಎಸ್ ಮುಖಂಡ ರಘುನಂದನ್ ಮಾತನಾಡಿ ಬಿ ಆರ್ ರಾಮಚಂದ್ರ ಅವರಿಗೆ ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಉತ್ತಮ ಭವಿಷ್ಯ ಸಿಗುವಂತಾಗಲಿ ನಿಮ್ಮ ಮನೆಯ ಮಗನಾಗಿ ಸಾರ್ವಜನಿಕ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ ಅವರಿಗೆ ಮುಂದೆ ಉತ್ತಮ ಭವಿಷ್ಯ ಲಭಿಸಲಿದೆ ಎಂದು ಶುಭ ಹಾರೈಸಿದರು,
ಜೆಡಿಎಸ್ ಯುವ ಮುಖಂಡ ಕಿರಣ್ ರಾಮೇಗೌಡ ಮಾತನಾಡಿ 27 ಗ್ರಾಮಗಳಲ್ಲಿ ರಾಮಚಂದ್ರು ಅವರ ಹುಟ್ಟುಹಬ್ಬವನ್ನು ಕಾರ್ಯಕರ್ತರೊಂದಿಗೆ ಆಚರಿಸುತ್ತಿದ್ದು ಅದರ ಅಂಗವಾಗಿ ಕೆರಗೋಡಿನಲ್ಲಿ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ ಬಡವರಿಗೆ ಸೇವೆ ಮಾಡುತ್ತಾ ಬಂದಿರುವ ಬಿ ಆರ್ ರಾಮಚಂದ್ರ ಅವರಿಗೆ ರಾಜಕೀಯದಲ್ಲಿ ಯಶಸ್ಸು ಸಿಗಲಿ ಎಂದು ಆಶಿಸಿದರು.
ಕೆರಗೋಡು ಸುತ್ತಮುತ್ತಲಿನ ಗ್ರಾಮಗಳ ರಾಮಚಂದ್ರು ಅಭಿಮಾನಿಗಳು ಜೆಡಿಎಸ್ ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಹುಟ್ಟು ಹಬ್ಬದ ಶುಭಾಶಯ ಕೋರಿದರು
ಈ ಸಂದರ್ಭದಲ್ಲಿ ಮಂಡ್ಯ ನಗರಸಭೆ ಮಾಜಿ ಅಧ್ಯಕ್ಷ ನಾಗೇಶ್, ಬಿಆರ್ ಸುರೇಶ್, ಬಿಡದಿ ಬಸವರಾಜು, ಹೇಮಂತ್,ನಗರಸಭೆ ಮಾಜಿ ಸದಸ್ಯ ರಾಮಲಿಂಗಯ್ಯ, ಆನಂದ್, ಸೇರಿದಂತೆ ಹಲವರು ಭಾಗವಹಿಸಿದ್ದರು.

Leave a Reply