
ಮಂಡ್ಯ ನಗರದ ಗುತ್ತಲು ಬಡಾವಣೆಯಲ್ಲಿರುವ ಕೆಪಿಎಸ್ ಪಬ್ಲಿಕ್ ಶಾಲೆಯಲ್ಲಿ ತಯಾರಿಸಲಾದ ಬಿಸಿ ಊಟದಲ್ಲಿ ಹುಳಗಳು ಇರುವುದು ಕಂಡು ಬಂದಿದ್ದು, ವಿದ್ಯಾರ್ಥಿಗಳು ಊಟವನ್ನು ತಿನ್ನದೇ ಬಿಸಾಡಿರುವ ಘಟನೆಯು ಶುಕ್ರವಾರ ನಡೆದಿದೆ.
ಈ ಶಾಲೆಯಲ್ಲಿ ನರ್ಸರಿಯಿಂದ ಹೈಸ್ಕೂಲ್ ವರೆಗೆ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಎಲ್ಲರೂ ಶಾಲೆಯಲ್ಲಿ ಬಿಸಿ ಊಟ ಸೇವಿಸುತ್ತಿದ್ದಾರೆ. ಶಾಲೆಯಲ್ಲಿ ಬಿಸಿಊಟ ನಿರ್ವಹಣೆಯಲ್ಲಿ ಲೋಪ ದೋಷಗಳು ಕಂಡು ಬರುತ್ತಿರುವ ಬಗ್ಗೆ ಹಿಂದೆ ಅಧಿಕಾರಿಗಳಿಗೆ ಗಮನಕ್ಕೆ ತರಲಾಗಿತ್ತು ಎನ್ನಲಾಗಿದೆ.
ಶುಕ್ರವಾರ ಮಧ್ಯಾಹ್ನ ವಿದ್ಯಾರ್ಥಿಗಳಿಗಾಗಿ ಬಿಸಿಬೇಳೆ ಬಾತ್ ಅನ್ನು ತಯಾರಿಸಿ, ನೀಡಲಾಗಿದ್ದು, ಊಟದಲ್ಲಿ ಹುಳುಗಳನ್ನು ಕಂಡ ಮಕ್ಕಳು ತಿನ್ನದೇ ಬಿಸಾಡಿದ್ದಾರೆ. ಇದರಿಂದ ಗಲಿಬಿಲಿಗೊಂಡ ಉಪಾಧ್ಯಾಯರು ನಂತರ ಉಪ್ಪಿಟ್ಟನ್ನು ತಯಾರಿಸಿ ನೀಡಿದ್ದಾರೆ ಎನ್ನಲಾಗಿದೆ.
ಬಿಸಿಯೂಟ ತಯಾರಿಕೆ ಕಳಪೆ ಅಕ್ಕಿ ಮೊದಲುನಿಂದಲೂ ಪೂರೈಕೆ ಆಗುತ್ತಿದೆ ಎಂಬ ಆರೋಪಗಳಿವೆ. ಈ ಹಿಂದೆಯೇ ಬಿಸಿ ಊಟದಲ್ಲಿ ಉಂಟಾಗುತ್ತಿರುವ ಲೋಪದೋಷಗಳನ್ನು ಶಾಲೆಯ ಎಸ್ಟಿಎಂಸಿ ಉಪಾಧ್ಯಕ್ಷ ಕಾಂತರಾಜ್ ಅರಸುರವರು ಮೇಲಾಧಿಕಾರಿಗಳ ಗಮನಕ್ಕೂ ತಂದರು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎನ್ನಲಾಗಿದೆ.
ಶಾಲೆಯಲ್ಲಿ ಇತ್ತೀಚಿಗೆ ನಡೆದ ಪೋಷಕರ ಸಭೆಯಲ್ಲಿ ಶಾಲಾ ಮಕ್ಕಳಿಗೆ ಕಳಪೆ ಆಹಾರ ನೀಡುತ್ತಿರುವ ಬಗ್ಗೆ ಶಿಕ್ಷಕರನ್ನು ಬಡವರ ಮಕ್ಕಳು ಎಂಬ ಕಾರಣಕ್ಕಾಗಿ ಇಂತಹ ಆಹಾರವನ್ನು ಕೊಡುತ್ತಿದ್ದೀರಾ, ಹುಳಗಳು ಬಿದ್ದಿರುವ ಆಹಾರವನ್ನು ನೀಡುತ್ತಿರ ನಿಮಗೆ ಸ್ವಲ್ಪವೂ ಮಾನ್ಯವಹಿತೆ ಕರುಣೆ ಇಲ್ಲವೇ ಎಂದು ಪೋಷಕರು ಶಿಕ್ಷಕರನ್ನು ಪೋಷಕರು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮಕ್ಕಳಿಗೆ ಹುಳುಗಳು ಬಿದ್ದಿರುವ ಆಹಾರವನ್ನು ನೀಡಿ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದರೆ ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಣ ಇಲಾಖೆ ಅಧಿಕಾರಿ ವರ್ಗದವರು ನೇರ ಕಾರಣರಾಗುತ್ತಾರೆ. ಕೂಡಲೇ ಬಿಸಿ ಊಟ ನಿರ್ವಹಣೆ ಮಾಡುತ್ತಿರುವ ಸಂಬಂಧ ಪಟ್ಟ ಅಧಿಕಾರಿಗಳು ಉಪಾಧ್ಯಾಯರು ಮತ್ತು ಆಹಾರ ತಯಾರಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾಂತರಾಜ್ ಅರಸ್ ಒತ್ತಾಯಿಸಿದ್ದಾರೆ.
ಕೂಡಲೇ ಸಿಇಓ, ಬಿಸಿಯೂಟ ಅಧಿಕಾರಿಗಳು, ಕೂಡಲೇ ಶಾಲೆಗೆ ಭೇಟಿ ನೀಡಿ ತಪ್ಪಿಸ್ಥತ್ತರ ವಿರುದ್ಧ ಕ್ರಮ ಕೈಗೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳ ಹಿತವನ್ನು ಕಾಪಾಡುವಂತೆ ಜನರ ಧ್ವನಿಯೂ ಆಗ್ರಹಿಸುತ್ತದೆ

Leave a Reply