Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ನಾಪತ್ತೆಯಾಗಿದ್ದ ತಂದೆ ಮಕ್ಕಳು ನಾಲೆಯಲ್ಲಿ ಶವವಾಗಿ ಪತ್ತೆ

ಮಂಡ್ಯ: ಶ್ರೀರಂಗಪಟ್ಟಣ ತಾಲೂಕು ಕೆ.ಆರ್.ಎಸ್. ಜಲಾಶಯ ಸಮೀಪದ ನಾರ್ಥ್  ಬ್ಯಾಂಕ್ ಬಳಿ ಕಾಲುವೆಯಲ್ಲಿ ಸ್ಯಾಂಟ್ರೋ ಕಾರು ಮುಳುಗಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.

ಮೈಸೂರು ಜಿಲ್ಲಾ ಕೆ.ಆರ್.ನಗರ ತಾಲೂಕಿನ ಕುಮಾರಸ್ವಾಮಿ(38), ಅದ್ವೈತ್(8), ಅಕ್ಷತಾ(3) ಮೃತರು. ಇವರು ಏಪ್ರಿಲ್ 16 ರಂದು ಬೆಂಗಳೂರಿನಿಂದ ಕೆ.ಆರ್.ನಗರಕ್ಕೆ ಕಾರಿನಲ್ಲಿ ಹೊರಟಿದ್ದರು. ಆದರೆ ಮನೆಗೆ ತಲುಪದ ಹಿನ್ನೆಲೆಯಲ್ಲಿ ಇವರು ಕಾಣೆಯಾಗಿರುವ ಬಗ್ಗೆ ಏಪ್ರಿಲ್ 19 ರಂದು ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಮಧ್ಯೆ ನಾಲೆಯಲ್ಲಿ ಮಂಗಳವಾರ ನೀರಿನ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ನಾಲೆಯಲ್ಲಿ ಸ್ಯಾಂಟ್ರೋ ಕಾರು ಬಿದ್ದಿರುವುದು ಬೆಳಕಿಗೆ ಬಂದಿದೆ. ಆರಲು ಪರಿಶೀಲಿಸಿದಾಗ ಅದರೊಳಗೆ ಇಬ್ಬರು ಮಕ್ಕಳು ಶವಗಳು ಪತ್ತೆಯಾಗಿವೆ.ಕೃಷ್ಣರಾಜಸಾಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!