Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಮಂಡ್ಯ ಜಿಲ್ಲಾ ಕೃಷಿಕ ಸಮಾಜಕ್ಕೆ ನೂತನ ಪದಾಧಿಕಾರಿಗಳು ಆಯ್ಕೆ

ಮಂಡ್ಯ ಜಿಲ್ಲಾ ಕೃಷಿಕ ಸಮಾಜದ 2025-26 ರಿಂದ 2029-30 ನೇ ಸಾಲುಗಳ 5 ವರ್ಷ ಅವಧಿಗೆ ಅಧ್ಯಕರು, ಉಪಾಧ್ಯಕ್ಷರು , ಪ್ರಧಾನಕಾರ್ಯದರ್ಶಿ , ಖಜಾಂಜಿ ಮತ್ತು ರಾಜ್ಯ ಪ್ರತಿನಿಧಿಗಳ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಈ ಕೆಳಕಂಡವರು ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷರಾಗಿ ಸಿ.ಎಂ.ನಾಗರಾಜು ಚಾಮಲಾಪುರ, ಉಪಾಧ್ಯಕ್ಷರಾಗಿ ಜಿ.ಧನಂಜಯ ದರಸಗುಪ್ಪೆ ಶ್ರೀರಂಗಪಟ್ಟಣ, ಪ್ರಧಾನ ಕಾರ್ಯದರ್ಶಿಯಾಗಿ ಜಿ.ಡಿ. ಚಂದ್ರಶೇಖರ್ ಮದ್ದೂರು , ಖಜಾಂಜಿಯಾಗಿ ಬಿ.ಎಂ.ಪ್ರಕಾಶ್ ಮಳವಳ್ಳಿ , ರಾಜ್ಯ ಪ್ರತಿನಿಧಿಯಾಗಿ ಎಸ್.ಆರ್. ಮಂಜುನಾಥ್ ಗೌಡ ನಾಗಮಂಗಲರವರುಗಳು ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಜಂಟಿ ಕೃಷಿ ನಿರ್ದೇಶಕ ಅಶೋಕ್ ಕಾರ್ಯನಿರ್ವಹಿಸಿದರು.

ಮಂಡ್ಯ ಜಿಲ್ಲಾ ಕೃಷಿಕ ಸಮಾಜದ ರಾಜ್ಯ ನೂತನ ಪ್ರತಿನಿಧಿ ಹಾಗೂ ಹಾಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷರಾದ ಎಸ್.ಆರ್. ಮಂಜುನಾಥ್ ಗೌಡ ಮಾತನಾಡುತ್ತಾ,ಮಂಡ್ಯ ಜಿಲ್ಲೆಯ ಕೃಷಿಕ ಸಮಾಜದ ಎಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಹಾಗೂ ಇಲಾಖೆ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತಾ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಕೃಷಿ ಮಂತ್ರಿಗಳಾದ ಮಾನ್ಯ ಎನ್. ಚಲುವರಾಯಸ್ವಾಮಿ ರವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇನ್ನು ಮುಂದೆಯೂ ಅವರ ಮಾರ್ಗದರ್ಶನದಂತೆಯೇ ಜಿಲ್ಲೆಯಾದ್ಯಂತ ಕೃಷಿ ಭವನಗಳಿಗೆ ನಿವೇಶನ ಹಾಗೂ ಕಟ್ಟಡ ನಿರ್ಮಾಣ ಮಾಡಲು ಶ್ರಮಿಸುವುದಾಗಿ ತಿಳಿಸಿದರು.

ನೂತನ ಜಿಲ್ಲಾಧ್ಯಕ್ಷ ಸಿ.ಎಂ.ನಾಗರಾಜು ಚಾಮಲಾಪುರ ಮಾತನಾಡುತ್ತಾ, ಮಂಡ್ಯ ಜಿಲ್ಲಾ ಕೇಂದ್ರ ಸ್ಥಾನದಲ್ಲಿರುವ ಕಟ್ಟಡದ ನಿವೇಶನ ಸಮಾಜದ ಹೆಸರಿಗೆ ನೋಂದಣಿ ಮಾಡಿಸಿಕೊಂಡು, ಕಟ್ಟಡ ನಿರ್ಮಾಣ ಮಾಡುವುದು ಪ್ರಥಮ ಆದ್ಯತೆಯಾಗಿದೆ ಎಂದರು.

ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ನಿರ್ದೇಶಕಗಳು ಹಾಗೂ ಬೆಂಬಲಿಗರು ಅಭಿನಂದಿಸಿ ಸನ್ಮಾನಿಸಿದರು.

ಈ ಕೆ ಆರ್ ಪೇಟೆ ತಾಲೂಕು ಅಧ್ಯಕ್ಷ ಗಂಗಾಧರ್ , ಸೇರಿದಂತೆ ಎಲ್ಲ ತಾಲೂಕು ಅಧ್ಯಕ್ಷರುಗಳು ನಿರ್ದೇಶಕರುಗಳು ಹಾಜರಿದ್ದರು.

 

Leave a Reply

Your email address will not be published. Required fields are marked *

error: Content is protected !!