
ಖಾತೆ ಮಾಡಿಕೊಡುವ ಸಂಬಂಧ ಹನುಮಂತನಗರದ ಅಶ್ವಥ್ ಎಂಬುವರಿಂದ 25 ಸಾವಿರ ರು. ಲಂಚ ಕೇಳಿದ್ದಾರೆಂದು ತಿಳಿದುಬಂದಿದೆ. ಅದರಂತೆ ಈಗಾಗಲೇ13 ಸಾವಿರ ರು. ಆನ್‌ಲೈನ್‌ನಲ್ಲಿ ವರ್ಗಾವಣೆ ಮಾಡಿಸಿಕೊಳ್ಳಲಾಗಿತು. ಇತ್ತ ಅಶ್ವಥ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರಿಂದ ಸೋಮವಾರ ರಾತ್ರಿ ಹನುಮಂತನಗರದ ರಸ್ತೆ ಬದಿಯೇ ಎಂಟು ಸಾವಿರ ರು. ನಗದು ಪಡೆಯುವ ವೇಳೆ ದಾಳಿ ನಡೆಸಲಾಗಿದೆ.
ಲೋಕಾ ಎಸ್ಪಿ ಸುರೇಶ್‌ಬಾಬು ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್ಸ್ ಪೆಕ್ಟರ್ ಜಯರತ್ನಾ, ಸಿಬ್ಬಂದಿ ಶರತ್, ಶಂಕರ್, ದಿನೇಶ್, ಯೋಗೇಶ್, ನವೀನ, ರಾಮಲಿಂಗು ದಾಳಿ ನಡೆಸಿ ಪಿಡಿಒ ದಯಾನಂದ್ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Leave a Reply