
ಮದ್ದೂರು ಪಟ್ಟಣದ ಡಿ-2 ಡಯಾಗೋಸ್ಟಿಕ್ ಸೆಂಟರ್ ಗೆ ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ಸ್ಕ್ಯಾನಿಂಗ್ ಸೆಂಟರ್ನ ದಾಖಲೆ ಪರಿಶೀಲನೆ ನಡೆಸಿದರು.
ಸ್ಕ್ಯಾನಿಂಗ್ ಮಾಡಿಸಿರುವ ಗರ್ಭಿಣಿ ಮಹಿಳೆಯರ ದಾಖಲೆಗಳು ಮತ್ತು ಫಾರಂಗಳನ್ನು ದಾಖಲೆ ಪರಿಶೀಲನೆ ನಡೆಸಿ, ಗರ್ಭ ಪೂರ್ವ ಮತ್ತು ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ ಸಮರ್ಪಕವಾಗಿ ಜಾರಿ ಮತ್ತು ಅನುಷ್ಠಾನಗೊಳಿಸಬೇಕು ಎಂದರು.
ಗರ್ಭಿಣಿ ಮಹಿಳೆ ಹಾಗೂ ಬರುವ ಪೋಷಕರಿಗೆ ಜಾಗೃತಿ ಮೂಡಿಸಲು ಹಾಗೂ ಎಚ್ಚರಿಕೆ ನೀಡಲು ಶಿಕ್ಷೆ ಮತ್ತು ದಂಡ ಹಾಗೂ ಹೆಣ್ಣು ಮಕ್ಕಳ ಮಹತ್ವ, ಲಿಂಗ ಪತ್ತೆ ಕಾನುನೂಬಾಹಿರ ಎಂಬ ಸಾರುವ ಜಾಗೃತಿ ಮೂಡಿಸುವ ಸೂಚನ ಫಲಕಗಳನ್ನು ಸ್ಥಳೀಯ ಭಾಷೆಯಲ್ಲಿ ದೊಡ್ಡ ಗಾತ್ರದಲ್ಲಿ ಪ್ರದರ್ಶನ ಮಾಡಲು ಸೂಚಿಸಿದರು.
ದಾಖಲೆಗಳನ್ನು ಕಡ್ಡಾಯವಾಗಿ ಎರಡು ವರ್ಷಗಳವರಗೆ ಇಟ್ಟಿರಬೇಕು. ಬಾಲ ಗರ್ಭಿಣಿ ಕಂಡರೆ ತಾಲೂಕು ಆಡಳಿತಕ್ಕೆ ಮತ್ತು ಆರೋಗ್ಯ ಅಧಿಕಾರಿಗಳಿಗೆ ಮುಂದಿನ ಕ್ರಮಕ್ಕಾಗಿ ಕಡ್ಡಾಯವಾಗಿ ತಿಳಿಸುವಂತೆ ಸೂಚಿಸಿದ ರು.ಪ್ರತಿ ಮೂರು ತಿಂಗಳಿಗೊಮ್ಮೆ ಸ್ಯಾ ನಿಂಗ್ ಸೆಂಟರ್ಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ದಾಖಲೆ ಪರಿಶೀಲಿಸಲಾಗುವುದು. ಕಾನೂನು ಉಲ್ಲಂಘನೆ ಮಾಡಿದರೆ ಸ್ಕ್ಯಾನಿಂಗ್ ಸೆಂಟರ್ಗಳ ಮೇಲೆ ಕ್ರಮ ಕೈಗೊಳುತ್ತೇವೆ ಎಚ್ಚರಿಸಿದರು.
ತಪಾಸಣೆ ವೇಳೆ ಪ್ರಭಾರ ತಾಲೂಕು ಆರೋಗ್ಯಾಧಿಕಾರಿ ಡಾ.ರವಿಶಂಕರ್, ಡಿ2 ಸ್ಕ್ಯಾನಿಂಗ್ ಸೆಂಟರ್ ಮಾಲೀಕರಾದ ಡಾ. ದೀಪಕ್ ಗೌತಮ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

Leave a Reply