Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಅಧಿಕಾರಿಗಳ ನೇಮಕ : ಡಿಸಿ ಆದೇಶ

ಮಂಡ್ಯ ತಾಲೂಕಿನಾದ್ಯಂತ ಅಧಿಕಾರದ ಅವಧಿ ಮುಗಿಯುತ್ತಿರುವ  ಗ್ರಾಪಂ ಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಆಡಳಿತಾಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.

ಶಿವಪುರ ಹಾಗೂ ಕಂಬದಹಳ್ಳಿ ಗ್ರಾ ಪಂ ಆಡಳಿತಾಧಿಕಾ ರಿಯನ್ನಾಗಿ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರು. ಚಂದಗಾಲು, ಬಸರಾಳು ಗ್ರಾಪಂಗೆ ಪಂಚಾಯತ್‌ರಾಜ್ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರು. ಮುತ್ತೇಗೆರೆ, ಜಿ.ಮಲ್ಲಿಗೆರೆ ಗ್ರಾಪಂಗೆ ಶಿಶು ಅಭಿವೃದ್ಧಿ ಯೋಜನಾಕಾರಿ, ಬೇಬಿ, ಹಲ್ಲೆಗೆರೆ ಗ್ರಾಪಂಗೆ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿ ಯರ್, ದೊಡ್ಡಗರುಡನಹಳ್ಳಿ, ಕೆರಗೋಡು ಗ್ರಾಪಂಗೆ ಮಂಡ್ಯ ತಾಲೂಕು ಸಹಾಯಕ ಕೃಷಿ ಅಧಿಕಾರಿ. ಉಪ್ಪರಕ ನಹಳ್ಳಿ, ಮುದಗಂದೂರು ಗ್ರಾಪಂಗೆ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರನ್ನು ನೇಮಕ ಮಾಡಲಾಗಿದೆ.

ಬೇವುಕಲ್ಲು, ದುದ್ದ ಗ್ರಾಪಂಗೆ ಎಚ್‌ಎಲ್‌ಬಿಸಿ ದುದ್ದ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತ ರರು. ಬಿ.ಹೊಸೂರು, ಹೊಡಾಘಟ್ಟ ಗ್ರಾಪಂಗೆ ದಕ್ಷಿಣ ವಲಯ ಬಿಇಒ, ಮಾರಗೌಡನಹಳ್ಳಿ, ಆಲಕೆರೆ ಗ್ರಾಪಂಗೆ ಪಿಡಬ್ಲ್ಯೂಡಿ ಸಹಾಯಕ ಎಂಜಿನಿಯರ್, ಕೀಲಾರ, ಹುಲಿವಾನ ಗ್ರಾಪಂಗೆ ಸಮಾಜ ಕಲ್ಯಾಣ ಇಲಾಖೆ ಸಹಾ ಯಕ ನಿರ್ದೇಶಕರು. ಎಚ್.ಮಲ್ಲಿಗೆರೆ, ಶಿವಳ್ಳಿ ಗ್ರಾಪಂಗೆ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಹುಳ್ಳೇನಹಳ್ಳಿ, ಗೋಪಾಲಪುರ ಗ್ರಾಪಂಗೆ ಕಾವೇರಿ ನೀರಾವರಿ ನಿಗಮದ ವಿ.ಸಿ.2 ಉಪ ವಿಭಾಗದ ಸಹಾಯಕ ಅಭಿಯಂತರರು. ಗಾಣದಾಳು, ಹೊಳಲು ಗ್ರಾಪಂಗೆ ಸಹಾಯಕ ಕೃಷಿ ನಿರ್ದೇಶರು, ಸಾತನೂರು, ಉಮ್ಮಡಹಳ್ಳಿ ಗ್ರಾಪಂಗೆ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಮಂಡ್ಯ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು.
ಹನಕೆರೆ, ಕನ್ನಲಿ ಗ್ರಾಪಂಗೆ ಪಿಎಂ.ಪೋಷಣ್ ಯೋಜನೆಯ ಸಹಾಯಕ ನಿರ್ದೇಶಕರು. ಬಿ. ಗೌಡಗೆರೆ, ಬೇವಿನಹಳ್ಳಿ ಗ್ರಾಪಂಗೆ ಮೀನುಗಾ ರಿಕೆ ಇಲಾಖೆ ಸಹಾಯಕ ನಿರ್ದೇಶಕರು. ಮಂಡ್ಯ ಗ್ರಾಮಾಂತರ, ಚಂದಗಾಲು (ದುದ್ದ ) ಗ್ರಾಪಂಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಕಲ್ಯಾಣಾಧಿಕಾರಿ.ಮಾರಚಾಕನಹಳ್ಳಿ, ತೂಬಿನಕೆರೆ ಗ್ರಾಪಂಗೆ ಸಹಾಯಕ ತೋಟಗಾರಿಕೆ ಅಧಿ ಕಾರಿ. ಇಂಡುವಾಳು, ಬೇಲೂರು ಗ್ರಾಪಂಗೆ ತಾಲೂಕು ಯೋಜನಾಧಿಕಾರಿ. ಯಲಿಯೂರು, ಸೂನಗಹಳ್ಳಿ ಗ್ರಾ ಪಂಗೆ ಸಹಾಯಕ ತೋಟಗಾರಿಕೆ ನಿರ್ದೇಶಕರು. ತಗ್ಗಹಳ್ಳಿ, ಹಳುವಾಡಿ ಗ್ರಾಪಂಗೆ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಜಿಲ್ಲಾ ಅಭಿವೃದ್ಧಿ ಅಧಿಕಾರಿ. ಸಂತಕಸಲಗೆರೆ, ಬೂದನೂರುಗೆ ದುದ್ದ ಯೋಜನೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ. ಕೊತ್ತತ್ತಿ, ಮಂಗಲ ಗ್ರಾಪಂಗೆ ಯುವ ಸಬಲೀಕರಣ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರನ್ನು ನೇಮಕ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!