Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಸಿಇಓ ನಂದಿನಿ ಕೆ.ಆರ್ ರವರಿಂದ ತಾಲೂಕುವಾರು ಪ್ರಗತಿ ಪರಿಶೀಲನೆ ಸಭೆ

ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಕೆ. ಆರ್ ಅವರು ಜಿಲ್ಲೆಯ ಕೇಂದ್ರ, ರಾಜ್ಯ ಪುರಸ್ಕೃತ ಯೋಜನೆ, ಕಾರ್ಯಕ್ರಮಗಳ ಪ್ರಗತಿ ಪರಿಶೀಲಿಸಲು ಫೆಬ್ರವರಿ 4 ರಂದು ಬೆಳಗ್ಗೆ 10 ಗಂಟೆಗೆ ನಾಗಮಂಗಲ, ಮಧ್ಯಾಹ್ನ 12:30 ಗಂಟೆಗೆ ಮದ್ದೂರು, 3 ಗಂಟೆಗೆ ಮಳವಳ್ಳಿ, ಹಾಗೂ ಫೆಬ್ರವರಿ 5 ರಂದು ಬೆಳಗ್ಗೆ 10 ಗಂಟೆಗೆ ಶ್ರೀರಂಗಪಟ್ಟಣ, ಮಧ್ಯಾಹ್ನ 12 ಗಂಟೆಗೆ ಪಾಂಡವಪುರ ಮತ್ತು ಮಧ್ಯಾಹ್ನ 2:30 ಗಂಟೆಗೆ ಕೆ. ಆರ್. ಪೇಟೆಯಲ್ಲಿ ಆಯಾ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲ್ಲೂಕುವಾರು ಸಭೆ ನಡೆಸಲಿದ್ದಾರೆ.

ಸಭೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗಗಳ ಸಹಾಯಕ ಕಾರ್ಯಪಾಲಕ ಅಭಿಯಂತರು ಹಾಗೂ ಗ್ರಾಮ ಪಂಚಾಯತ್‌ಗಳ ಪಂಜಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಡ್ದಾಯವಾಗಿ ಹಾಜರಿರುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!