Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಎಷ್ಟೇ ಕಷ್ಟ ಬಂದರೂ ಜಮೀನನ್ನು ಮಾರಾಟ ಮಾಡಬೇಡಿ : ಶಾಸಕ ರಮೇಶ ಬಂಡಿಸಿದ್ದೇಗೌಡ

ರೈತರು ತಮಗೆ ಎಷ್ಟೇ ಕಷ್ಟ ಬಂದರೂ ಜಮೀನನ್ನು ಮಾರಾಟ ಮಾಡಬೇಡಿ ಎಂದು ಚೆಸ್ಕಾಂ ಅಧ್ಯಕ್ಷ ಹಾಗೂ ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.

ಅವರು ಮಂಡ್ಯ ತಾಲೂಕಿನ ಬೇಲೂರು ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಡೆದ ಬೇಲೂರು ಗ್ರಾಮ ಪಂಚಾಯಿತಿ ಮಟ್ಟದ ಜನತಾದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದರು

ರೈತರು ತಮ್ಮ ಮಕ್ಕಳಿಗೆ ಆಸ್ತಿ ಎಂದು ಉಳಿಸಿದರೆ ಅದು ಕೃಷಿ ಭೂಮಿ ಮಾತ್ರ, ಅದಕ್ಕಾಗಿ ತಮಗೆ ಎಷ್ಟೇ ಕಷ್ಟ ಬಂದರೂ ಹಿಂದಿನವರು ಬಾಳ್ವೆ ನಡೆಸಿದ ರೀತಿ ಜೀವನ ನಡೆಸಿ ತಮ್ಮ ಮಕ್ಕಳಿಗೆ ಹಾಗೂ ಮೊಮ್ಮಕ್ಕಳಿಗೆ ವ್ಯವಸಾಯ ಮಾಡಲು ಕೃಷಿ ಭೂಮಿಯನ್ನು ಉಳಿಸುವಂತೆ ರೈತರಿಗೆ ಸಲಹೆ ನೀಡಿದರು.

ಜಮೀನು ಮಾರಾಟ ಮಾಡಿ ಅದ್ದೂರಿಯಾಗಿ  ಮನೆ ಕಟ್ಟಿಸಿ ಒಡವೆ,ಕಾರು ತೆಗೆದುಕೊಳ್ಳುತ್ತೀರಿ. ಆರು ತಿಂಗಳ ನಂತರ ಒಡವೆ ಬ್ಯಾಂಕಿನಲ್ಲಿಟ್ಟು, ಕಾರನ್ನು ಮಾರಾಟ ಮಾಡುತ್ತೀರಿ. ಅದಕ್ಕಾಗಿ ರೈತರಿಗೆ ಏನೇ ಸಮಸ್ಯೆ ಬಂದರೂ ಜಮೀನನ್ನು ಮಾರಾಟ ಮಾಡಬಾರದು.  ಮಾರಾಟ ಮಾಡಿದರೆ ಮತ್ತೆ ಆ ಜಮೀನು ತೆಗೆದುಕೊಳ್ಳಲು  ಅಗುವುದಿಲ್ಲ. ಏಕೆಂದರೆ ಅಷ್ಟು ಹಣವನ್ನು ಸಂಪಾದನೆ ಮಾಡಲು ನಮ್ಮಿಂದ ಸಾಧ್ಯವಿಲ್ಲ ಎಂದು ರೈತರಿಗೆ ತಿಳಿ ಹೇಳಿದರು.

ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಬೇಲೂರು ಗ್ರಾಮದ ಜನತಾ ದರ್ಶನ ಕಾರ್ಯಕ್ರಮದಲ್ಲಿ ತಕ್ಷಣ ಪರಿಹರಿಸಬಹುದಾದ ಕೆಲಸಗಳನ್ನು ಪರಿಹಾರ ಮಾಡಿದ್ದೇವೆ. ಜನರುನಂಬಿಕೆ ಇಟ್ಟಿರುವ ಕೆಲಸಗಳನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ.ಜನm ದರ್ಶನ ಕಾರ್ಯಕ್ರಮದಲ್ಲಿ ಹಲವಾರು ಸಮಸ್ಯೆಗಳು ಹಾಗೂ ನಿವೇಶನಗಳ ಸಮಸ್ಯೆಗಳ ಅರ್ಜಿಗಳು ಹೆಚ್ಚಾಗಿ ಬಂದಿವೆ. ಅವುಗಳನ್ನು ಪರಿಹರಿಸುವ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದರು.

ಜನತಾದರ್ಶನದಲ್ಲಿ 75 ಅರ್ಜಿಗಳನ್ನು ಸ್ವೀಕರಿಸಲಾಯಿತು. ಕೆಲ ಅರ್ಜಿಗಳಿಗೆ ಸ್ಥಳದಲ್ಲೆ ಪರಿಹಾರ ನೀಡಿದರೆ, ಕೆಲ ಅರ್ಜಿಗಳನ್ನು ವಿಲೇಗಾಗಿ ಆಯಾಯ ಇಲಾಖೆಗೆ ರವಾನಿಸಲಾಯಿತು.

ಜನತಾ ದರ್ಶನ ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಹಶೀಲ್ದಾರ್ ವಿಶ್ವನಾಥ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಮೂರ್ತಿ,ಬೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುವರ್ಣಾವತಿ,ಉಪಾಧ್ಯಕ್ಷ ಅರ್ಕೆಶ್,ಭೂ ದಾಖಲೆಗಳ ಸಹಾಯಕ ನಿರ್ದೆಶಕಿ ಮಮತಾ, ಪೊಲೀಸ್ ಇನ್ಸೆಕ್ಟರ್ ಪ್ರಕಾಶ್,ರಾಜಶ್ವ ನಿರೀಕ್ಷಕರುಗಳಾದ ಅರವಿಂದ್, ರೋಹಿತ್, ಪಿಡಿಓ ಸಿದ್ದರಾಜು .ಕಾರ್ಯದರ್ಶಿ ಆಕಾಶ್ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!