Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

5 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗೆ ಶಾಸಕ ರವಿಕುಮಾರ್ ಚಾಲನೆ


ಕಾವೇರಿ ನೀರಾವರಿ ನಿಗಮದಿಂದ ಮುದ್ದಂಗೆರೆ ಗ್ರಾಮದಲ್ಲಿ ಸುಮಾರು 5 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಿವಿಧ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್‌ಗೌಡ  ಹೇಳಿದರು.
ಮಂಡ್ಯ ತಾಲೂಕಿನ ಮುದ್ದಂಗೆರೆ ಗ್ರಾಮದ ಹೆಬ್ಬಾಳ ಸಮೀಪವಿರುವ ಮುತ್ತರಾಯಸ್ವಾಮಿ ದೇವಾಲಯದಲ್ಲಿ ಕಾವೇರಿ ನೀರಾವರಿ ನಿಗಮ ಆಯೋಜಿಸಿದ್ದ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಮುದ್ದಂಗೆರೆ ಗ್ರಾಮದ  ಶ್ರೀ ಮುತ್ತರಾಯಸ್ವಾಮಿ ದೇವಾಲಯದ ಹತ್ತಿರದ ಹೆಬ್ಬಳದ ತಡೆಗೋಡೆ ನಿರ್ಮಾಣ,ಕಚ್ಚಿಗೆರೆ ಕೆರೆಯ ಸೇತುವೆ ಪುನರ್ ನಿರ್ಮಾಣ ಮತ್ತು ಬಿ.ಗೌಡಗೆರೆ ಕೆರೆ ಕೋಡಿ ಅಭಿವೃದ್ದಿ ಕಾಮಗಾರಿಯು 5 ಕೋಟಿ ರೂ.ಗಳಲ್ಲಿ ನಡೆಯುತ್ತಿದೆ, ನಿಮ್ಮೂರಿಗೆ 5 ಕೋಟಿ ರೂ.ಯೋಜನೆ ಬಂದಿರುವುದೇ ಇತಿಹಾಸ ಎಂದು ನುಡಿದರು.
ಕಳೆದ 2 ವರ್ಷದಿಂದ ಹೆಚ್ಚು ಮಳೆ ನೀರಿನಿಂದ ಮುತ್ತುರಾಯ ದೇವಸ್ಥಾನ ಮುಳುಗಡೆಯಾಗುತ್ತದೆ, ತಡೆಗೋಡೆ ನಿರ್ಮಾಣಕ್ಕೆ ನಮ್ಮ ಬಳಿ ಬಂದು ಕೇಳಿದ್ದರು,ಅದರಂತೆ ಶಾಶ್ವತ ಕಾಮಾಗರಿ ನಡೆಯುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಗ್ರಾಮಗಳ ರಸ್ತೆ, ಚರಂಡಿ ಅಭಿವೃದ್ದಿ ಮಾಡುತ್ತೇವೆ, ಹಗಲು ರಾತ್ರಿಯಾಗುವುದರೊಳಗೆ ಎಲ್ಲವನ್ನು ಮಾಡಲು ಸಾಧ್ಯವಿಲ್ಲ, ಇನ್ನೂ 3 ವರ್ಷ ಅಧಿಕಾರದಲ್ಲಿರುತ್ತೇವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸುತ್ತಿದೆ ಎಂದು ತಿಳಿಸಿದರು.
ಈ ಭಾಗದ ವಿವಿಧ  ಅಭಿವೃದ್ದಿಗೆ 25 ಕೋಟಿ ರೂ. ಹಾಕಿದ್ದೇವೆ, ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕೆಲಸ ಸುರುವಾಗಲಿದೆ, ಕೆರಗೋಡು ಹೋಬಳಿಯಲ್ಲೇ ನಿಮ್ಮ ಗ್ರಾಮ ಪಂಚಾಯತಿ ಅತಿಹೆಚ್ಚು ಮತಗಳನ್ನುಹಾಕಿ ನಮ್ಮ ಗೆಲುವಿಗೆ ಆಶೀರ್ವಾದ ಮಾಡಿದ್ದೀರಿ, ಅಭಿವೃದ್ದಿ ಮಾಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರಾದ ನಾರಾಯಣಪ್ಪ, ರಾಮು, ಆಲಕೆರೆ ಕೃಷ್ಣೇಗೌಡ, ಆನಂದ್, ಆಲಕೆರೆ ಮಾದೇವ, ಕೃಷ್ಣಪ್ಪ, ನಾರಾಯಣಸ್ವಾಮಿ, ರೈತಸಂಘದ ಜಗದೀಶ್ ಹರೀಶ್,ರವಿ ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!