Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಹುಟ್ಟು ಹಬ್ಬದ ಅಂಗವಾಗಿ ಹಣ್ಣು ಹಂಪಲು ವಿತರಣೆ

ಮಂಡ್ಯ ನಗರದ ಸಮೀಪದ ಯತ್ತಗದಹಳ್ಳಿ ಬೊರೆಯಲ್ಲಿರುವ ಅನಿಕೇತನ ವೃದ್ಧಾಶ್ರಮದಲ್ಲಿ ಕರ್ನಾಟಕ ರಕ್ಷಣ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ಜನ್ಮದಿನ ಪ್ರಯುಕ್ತ ಜಿಲ್ಲಾ ಮತ್ತು ತಾಲೂಕು ಘಟಕದ ಪದಾಧಿಕಾರಿಗಳು ವಯೋವೃದ್ದರಿಗೆ ಪೌಷ್ಠಿಕಾಹಾರ ಮತ್ತು ಮತ್ತು ಹಣ್ಣುಹಂಪಲುಗಳನ್ನು ವಿತರಿಸಿದರು.
ಬಳಿಕ ಮಾತನಾಡಿದ ಕರ್ನಾಟಕ ರಕ್ಷಣ ವೇದಿಕೆ ಜಿಲ್ಲಾಧ್ಯಕ್ಷ ವೇಣು, ನಾಡು ಕಂಡ ಕನ್ನಡ ನಾಡು ನುಡಿ-ಜಲ ನೆಲ ರಕ್ಷಣೆಯ ದೀಮಂತ ಹೋರಾಟಗಾರರಾದ ಟಿ.ಎ.ನಾರಾಯಣಗೌಡ ಅವರ ಹುಟ್ಟುಹಬ್ಬವನ್ನು ಸರಳವಾಗಿ ಸೇವಾ ಕಾರ್ಯದ ಮೂಲಕ ಆಚರಿಸಿದೆವು ಎಂದು ನುಡಿದರು.
ಕಳೆದ ೩೦ ವರ್ಷಗಳಿಂದ ಕನ್ನಡ ಭಾಷೆಗೆ ನೆರೆ-ಹೊರೆ ಭಾಷಿಗರಿಂದ ದಕ್ಕೆಯಾಗುವುದನ್ನು ತಪ್ಪಿಸಲು ಸಂಘಟನೆ, ಚಳುವಳಿ, ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ, ಇಂಹತ ಕನ್ನಡಪ್ರೇಮಿ ಹೋರಾಟಗಾರರ ಜನ್ಮದಿನವನ್ನು ಅರ್ಥಪೂರ್ಣವಾಗಿ ಸೇವಾಕಾರ್ಯದ ಮೂಲಕ ಆಚರಿಸಿ, ದೀನದಲಿತರಿಗೆ ನೆರವಾಗುತ್ತಿದ್ದೇವೆ ಎಂದರು.
ನಾಡಿನ 31 ಜಿಲ್ಲೆಗಳಲ್ಲಿಯೂ ಕನ್ನಡ ನಾಡು ನುಡಿ, ಮಹಿಳೆ, ವಿದ್ಯಾರ್ಥಿ, ನೆರೆ ಹೊರೆ ಗಡಿನಾಡಿನ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ, ಜನಪರ ಹೋರಾಟಗಳಿಗಾಗಿ ಸಾಕಷ್ಟು ಕೇಸುಗಳು ಬಿದ್ದಿವೆ, ಜೈಲು ಚಳುವಳಿಯೂ ಆಗಿದೆ, ಕನ್ನಡ ಭಾಷೆಗೆ ಸಮಗ್ರ ಸ್ಥಾನ ಮಾನ, ಕನ್ನಡಿಗರಿಗೆ ಉದ್ಯೋಗ-ಉದ್ಯಮ ಸಿಗಲಿ ಎಂಬುದೇ ಇವರ ಧ್ಯೇಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾ ಮಹಿಳಾ ಘಟಕದ ಗೌರವಾಧ್ಯಕ್ಷೆ ಸುಜಾತಕೃಷ್ಣ, ಕಾರ್ಯದರ್ಶಿ ರಾಮಚಂದ್ರೇಗೌಡ, ತಾಲೂಕು ಅಧ್ಯಕ್ಷ ತೇಜಕುಮಾರ್, ಕೆ.ಆರ್.ಪೇಟೆ ತಾಲೂಕು ಅಧ್ಯಕ್ಷ ಶ್ರೀನಿವಾಸ್‌ಗೌಡ, ಪದ್ಮನಾಭ್, ಆನಂದ, ಗೋಪಿ, ಪದ್ಮಮ್ಮ, ಶಶಿಕಲಾ, ಸರೋಜಾ, ಅನಿಲ್, ಸ್ವಾಮಿ ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!