Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಪಣಕನಹಳ್ಳಿ ಸೊಸೈಟಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳ ಜಯಭೇರಿ

ಮಂಡ್ಯ ತಾಲ್ಲೂಕು ಕಸಬಾ ಹೋಬಳಿ  ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ 5 ವರ್ಷದ ಅವಧಿಗೆ 11 ನಿರ್ದೇಶಕ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ 11 ಮಂದಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದರು. ಜೆಡಿಎಸ್ ಮುಖಂಡ ಹಾಗೂ ಮನ್ಮುಲ್ ಮಾಜಿ ಅಧ್ಯಕ್ಷರಾದ ಬಿ ಆರ್ ರಾಮಚಂದ್ರು ನೇತೃತ್ವದಲ್ಲಿ ನೂತನ ನಿರ್ದೇಶಕರುಗಳಿಗೆ ಅಭಿನಂದನೆ ಸಮಾರಂಭವನ್ನು ಮಂಡ್ಯ ಹೊರವಲಯದ ಖಾಸಗಿ ರೆಸಾರ್ಟ್ ನಲ್ಲಿ ಇಂದು ಆಯೋಜನೆ ಮಾಡಲಾಗಿತ್ತು.

ನೂತನ ನಿರ್ದೇಶಕರುಗಳನ್ನು ಅಭಿನಂದಿಸಿ ಮಾತನಾಡಿದ ಜೆಡಿಎಸ್ ಮುಖಂಡ ಮನ್ಮುಲ್ ಮಾಜಿ ಅಧ್ಯಕ್ಷರಾದ ಬಿ ಆರ್ ರಾಮಚಂದ್ರು , ಸ್ಥಳೀಯ ಕಾಂಗ್ರೆಸ್ ಶಾಸಕರು ಮತ್ತು ಕಾಂಗ್ರೆಸ್ ಸರ್ಕಾರ ಇದ್ದರು ಸಹ ಒಗ್ಗಟ್ಟಿನಿಂದ ಪಣಕನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ 11ಕ್ಕೆ 11 ಸ್ಥಾನವನ್ನು ಪಡೆಯುವ ಮೂಲಕ ಪಕ್ಷಕ್ಕೆ ಬಲ ತಂದುಕೊಟ್ಟಿದ್ದಿರಿ ಎಂದು ಶುಭಹಾರೈಸಿದರು. ಕಳೆದ ಬಾರಿ ನಾನು ಕಡಿಮೆ ಮತಗಳ ಅಂತರದಿಂದ ಸೋತಿದ್ದರೂ ಕೂಡ ಈ ಭಾಗದಲ್ಲಿ ಅತಿ ಹೆಚ್ಚು ಮತಗಳನ್ನು ನೀಡಿ ಅಂತರವನ್ನು ನೀಡಿದ್ದೀರಿ,ನಿಮ್ಮ ಋಣ ನನ್ನ ಮೇಲೆ ಇದೆ ಎಂದು ನುಡಿದರು. ಜೆಡಿಎಸ್ ಮತ್ತು ಬಿಜೆಪಿ ಮುಖಂಡರುಗಳು ಪಕ್ಷಾಂತರ ಮಾಡಬೇಡಿ ಎಂದು ಇದೆ ವೇಳೆ ಮನವಿ ಮಾಡಿದ ಅವರು ಮುಂದಿನ ದಿನಗಳಲ್ಲಿ ನಮಗೆ ಒಳ್ಳೆಯ ಅವಕಾಶವಿದೆ ಎಂದು ತಿಳಿಸಿದರು.

ಬಳಿಕ ಗ್ರಾಮಗಳ ಮುಖಂಡರು ಹಾಗೂ ಜೆಡಿಎಸ್-ಬಿಜೆಪಿ ಮುಖಂಡರುಗಳು ನೂತನ ನಿರ್ದೇಶಕರುಗಳಿಗೆ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಶಂಕರೇಗೌಡ , ಗ್ರಾಮ ಪಂಚಾಯತಿ ಸದಸ್ಯರುಗಳಾದ ಕೋಣನಹಳ್ಳಿ ಮಂಜು , ಪಣನಕಹಳ್ಳಿ ಲೋಕೇಶ್ ,  ಬಿಜೆಪಿ ಕುಮಾರ್ , ತಂಡಸಹಳ್ಳಿ ನವೀನ್ , ಉಮೇಶ್ , ಗೋಪಾಲ , ಪಿ ಎನ್ ರಾಜು ,ಕೋಣನಹಳ್ಳಿ ಕುಮಾರ್ , ದೇವರಾಜು ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!