
ಮಂಡ್ಯ ತಾಲೂಕಿನ ಪಣಕನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಟಿ.ಪಿ ರೇವಣ್ಣ ಅವರು ಅವಿರೋಧವಾಗಿ ಆಯ್ಕೆಯಾದರು.
ಹಿಂದಿನ ಅಧ್ಯಕ್ಷ ನಾಗರಾಜುರವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಅಧ್ಯಕ್ಷ ಸ್ಥಾನಕ್ಕೆ ಸಂಘದ ಸಭಾಂಗಣದಲ್ಲಿ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಟಿ.ಪಿ ರೇವಣ್ಣ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಹಾಗೂ ಸಂಘದ ಸಿಇಓ ತಿಲಕೇಶ್ ರವರು ಅಧ್ಯಕ್ಷರಾಗಿ ಟಿ.ಪಿ ರೇವಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.
ನಂತರ ನೂತನ ಅಧ್ಯಕ್ಷ ಟಿ.ಪಿ ರೇವಣ್ಣ ಮಾತನಾಡಿ ಸಂಘದ ಎಲ್ಲಾ ನಿರ್ದೇಶಕರು ಸೊಸೈಟಿಯ ಅಧ್ಯಕ್ಷರಾಗಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ನಿರ್ದೇಶಕರ ಸಹಕಾರ ಮತ್ತು ಬೆಂಬಲದೊಂದಿಗೆ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೊಸೈಟಿ ಅಭಿವೃದ್ಧಿಗೆ ಕೆಲಸ ಶ್ರಮಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಲತಾ, ನಿರ್ದೇಶಕರುಗಳಾದ ವರದೇ ಗೌಡ,ಕೆ.ಕೆ ರಾಜು, ಪುಟ್ಟಮ್ಮ, ಬಸವರಾಜು, ನವೀನ್ ಕುಮಾರ್, ರವಿ, ಸಿಂಗ್ರಯ್ಯ, ವೆಂಕಟರಾಮ, ಗ್ರಾಮದ ಮುಖಂಡರುಗಳಾದ ಟಿ ಶಂಕರೇಗೌಡ, ರಾಜು,ರೇವಣ್ಣ, ಟಿ ಆರ್ ನವೀನ್ ಕುಮಾರ್, ಗೋಪಾಲ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರುಗಳಾದ ಲೋಕೇಶ್, ಮಂಜು,ಕುಮಾರ, ಸೇರಿದಂತೆ ಹಲವರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು .

Leave a Reply