
ಮಂಡ್ಯ ಜಿಲ್ಲೆಯ ಕೆಆರ್ಎಸ್ ಬೃಂದಾವನ ಗಾರ್ಡನ್ ನೋಡಲು ಹೊರ ರಾಜ್ಯಗಳಿಂದ ಬರುತ್ತಿದ್ದ ವಾಹನಗಳನ್ನು ಗುರಿಯಾಗಿಸಿಕೊಂಡು ಅವರಿಂದ ಹಣವನ್ನು ವಸೂಲಿ ಮಾಡುತ್ತಿದ್ದ ಮೂವರು ಪೊಲೀಸರನ್ನು ಅಮಾನತು ಮಾಡಿ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಯವರು ಆದೇಶ ಹೊರಡಿಸಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಪೊಲೀಸ್ ಠಾಣೆಯ ಮುಖ್ಯಪೇದೆ ಸೇರಿದಂತೆ ಒಟ್ಟು ಮೂವರು ಪೊಲೀಸರು ಸೇರಿಕೊಂಡು ಹೊರ ರಾಜ್ಯದಿಂದ ಕೆಆರ್ಎಸ್ ಬೃಂದಾವನ ಗಾರ್ಡನ್ ನೋಡಲು ಬರುತ್ತಿದ್ದ ವಾಹನಗಳಿಂದ ಹಣ ವಸೂಲಿ ಮಾಡುತ್ತಿದ್ದ ಬಗ್ಗೆ ವಿಡಿಯೋ ಸಾಕ್ಷಿ ಸಮೇತ ದೂರು ಬಂದ ಹಿನ್ನೆಲೆಯಲ್ಲಿ ಮುಖ್ಯ ಪೇದೆ ಸೇರಿ ಮೂವರು ಪೊಲೀಸ್ ಪೇದೆಗಳ ಸಸ್ಪೆಂಡ್ ಮಾಡಲಾಗಿದೆ.
ಕೆ ಆರ್ ಎಸ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಸ್ಟೇಬಲ್ ಪುರುಷೋತ್ತಮ್, ಕಾನ್ಸ್ ಸ್ಟೇಬಲ್ ಅನಿಲ್ ಕುಮಾರ್ ಹಾಗೂ ಪ್ರಭು ಸ್ವಾಮಿ ಎಂಬುವರನ್ನು ಅಮಾನತುಗೊಳಿಸಿ ಎಸ್ಪಿ ಆದೇಶಿಸಿದ್ದಾರೆ.

Leave a Reply