Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ರೈತ ಸಂಘಗಳು ಒಗ್ಗಟ್ಟಾಗಬೇಕು – ದರ್ಶನ್ ಪುಟ್ಟಣ್ಣಯ್ಯ

ಮಂಡ್ಯ:ರೈತರ ಸಮಸ್ಯೆಗಳನ್ನು ಇಟ್ಟು ಹೋರಾಟ ಮಾಡುವುದು ಎಲ್ಲಾ ಚಳುವಳಿಗಳ ಉದ್ದೇಶ ವಾಗಿದೆ.ಈ ಹಿನ್ನೆಲೆಯಲ್ಲಿ ರೈತ ಸಂಘಗಳು ಒಗ್ಗಟ್ಟಾಗಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ನಗರದ ಹಳೆ ತಾಲ್ಲೂಕು ಕಚೇರಿಯಲ್ಲಿರುವ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಕಚೇರಿ ಆವರಣದಲ್ಲಿ ವಿಶ್ವ ರೈತ ದಿನಾಚರಣೆ ಹಾಗೂ ನಿತ್ಯ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರ 75ನೇ ವರ್ಷದ ಜನ್ಮದಿನಾಚರಣೆ ಕಾರ್ಯಕ್ರಮ ಆಚರಿಸಿ ಅವರು ಮಾತನಾಡಿದರು.
ರೈತರು ಬೆಳೆ ಬೆಳೆಯುವ ಪದ್ಧತಿಗಳನ್ನು ಬದಲಾವಣೆ ಮಾಡಲಿಲ್ಲ ಅಂದರೆ ರೈತರು ಬೆಳೆದ ಬೆಳೆಗೆ ಬೆಲೆ ಸಿಗಲ್ಲ.ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆ ಆಗುತ್ತಿದೆ ಆದ್ದರಿಂದ ರೈತರು ಬೆಳೆ ಬೆಳೆಯುವ ಪದ್ಧತಿಗಳನ್ನು ಬದಲಾವಣೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಸರ್ಕಾರಗಳಿಂದ ಆಗದೇ ಇರುವ ಕೆಲಸಗಳನ್ನು ರೈತ ಸಂಘಗಳಿಂದ ಮಾಡಬಹುದು. ಪ್ರತಿ ಹಳ್ಳಿಯಲ್ಲಿ ರೈತರು ಇದ್ದಾರೆ ರೈತ ಶಕ್ತಿಯನ್ನು ಉಪಯೋಗಿಸಿಕೊಂಡು ರೈತ ಸಂಘವನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಇತ್ತೀಚೆಗೆ ರೈತ ಸಂಘಗಳ 21 ಜನ ಸಂಘಟನೆ ಅಧ್ಯಕ್ಷರುಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದಾಗ ಹೋರಾಟಗಾರರು ಹೋರಾಟಗಳನ್ನು ಮಾಡಬೇಕು. ಸತತವಾಗಿ ಹೋರಾಟದ ಚಳುವಳಿ ನಡೆಯಬೇಕು. ರೈತ ಸಂಘಗಳು ಒಗ್ಗಟ್ಟಾಗಿ,ಧ್ವನಿಯಾಗಿ ಹೋರಾಟ ಮಾಡಿ ರೈತ ಚಳುವಳಿ ನಡೆಸಿ ಕೊಂಡು ಹೋಗಬೇಕು ಎಂದು ಹೇಳಿದರು.
ಡಿಸೆಂಬರ್ 23ರಂದು ರಾಷ್ಟ್ರೀಯ ರೈತರ ದಿನ ಎಂದು ಆಚರಿಸಲಾಗುತ್ತದೆ.ಈ ದಿನವು ರೈತ ಸಮುದಾಯವನ್ನು ಉನ್ನತಿಕರಿಸುವ ಕೃಷಿ ಸುಧಾರಣೆಗಳು ಮತ್ತು ನೀತಿಗಳನ್ನು ಪ್ರತಿಪಾದಿಸಿದ ಮಾಜಿ ಪ್ರಧಾನಿ ಮತ್ತು ಪ್ರಮುಖ ರೈತ ನಾಯಕ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವಾಗಿದೆ ಎಂದರು
ರೈತ ಮುಖಂಡ ಮಂಜೇಶ್ ಗೌಡ ಮಾತನಾಡಿ ಸರ್ಕಾರ ಹಾಗೂ ಬಂಡವಾಳ ಶಾಹಿಗಳ ದೊಡ್ಡ ಶಕ್ತಿಯಾಗಿ ರೈತರು ಒಗ್ಗಟ್ಟಾಗಿ ಚಳುವಳಿ ಮಾಡಲಿಲ್ಲ ಅಂದರೆ ರೈತ ಕುಲ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದರು.
ಹರಿದು ಹಂಚಿಹೋಗಿರುವ ಎಲ್ಲಾ ರೈತ ಸಂಘಟನೆಗಳು ಒಂದು ತೆಕ್ಕೆಗೆ ಬಂದಾಗ ರೈತ ಸಂಘಟನೆ ಬಲಗೊಳ್ಳುತ್ತದೆ.ಯುವಶಕ್ತಿಗೆ ರೈತ ಚಳುವಳಿ ನೀಡಲು ಮುಂದಾಗ ಬೇಕು,ಅವರಿಗೆ ಸಹಕಾರ ನೀಡಬೇಕು ಒಗ್ಗಟ್ಟಾಗಿ ಚಳುವಳಿ ಬಲಪಡಿಸಲು ಎಲ್ಲರೂ ಪಣತೊಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಶಂಭುನಹಳ್ಳಿ ಸುರೇಶ್, ಇಂಡುವಾಳು ಚಂದ್ರಶೇಖರ್, ಸೊ.ಸಿ.ಪ್ರಕಾಶ್, ಮರಿಚನ್ನೇಗೌಡ,ಅಣ್ಣೂರು ಮಹೇಂದ್ರ,ಶಿವಳ್ಳಿ ಚಂದ್ರು, ಸಿದ್ದೇಗೌಡ,ಸುರೇಶ್ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಮಕ್ಕಳಾದ
ವಚನ್ ಪುಟ್ಟಣ್ಣಯ್ಯ,ನಿಧಿ ಪುಟ್ಟಣ್ಣಯ್ಯ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!