
ಮಂಡ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ಪಿ. ರವಿಕುಮಾರ್ ಅವರಿಗೆ ಮಂಡ್ಯ ತಾಲೂಕಿನ ದ್ಯಾಪಸಂದ್ರ ಗ್ರಾಮಸ್ಥರು `ನಿತ್ಯ ಶಾಸಕ’ರು ಎಂಬ ಬಿರುದು ನೀಡಿ ಗೌರವಿಸಿದರು.
ಪಿಎಲ್ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ದ್ಯಾಪಸಂದ್ರ ಉಮೇಶ್ ಮಾತನಾಡಿ, ಶಾಸಕ ರವಿಕುಮಾರ್ ಅವರು ತಮ್ಮ ಕ್ಷೇತ್ರದಲ್ಲಿ ನಿತ್ಯ ಒಂದಲ್ಲ ಒಂದು ಅಭಿವೃದ್ಧಿ ಕರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದಾರೆ. ಸದಾ ಚಟುವಟಿಕೆಯಿಂದ ಜನೋಪಯೋಗಿ ಕರ್ಯಗಳನ್ನು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕೆ.ವಿ. ಶಂಕರಗೌಡರು ಮಂಡ್ಯದಲ್ಲಿ ಮಾಡಿರುವ ಅಭಿವೃದ್ಧಿ ಕರ್ಯಗಳು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕೈಗೊಂಡ ನಿರ್ಧಾರಗಳಿಂದಾಗಿ ಅವರಿಗೆ ರಾಷ್ಟçಕವಿ ಕುವೆಂಪು ಅವರು ನಿತ್ಯ ಸಚಿವ ಎಂಬ ಬಿರುದು ನೀಡಿದ್ದರು. ಅದೇ ಮಾದರಿಯಲ್ಲಿ ಶಾಸಕ ರವಿಕುಮಾರ್ ಅವರು ಕೆಲಸ ಮಾಡುತ್ತಿರುವ ಕಾರಣ ನಿತ್ಯ ಶಾಸಕ ಎಂಬ ಬಿರುದನ್ನು ನೀಡಲಾಗಿದೆ ಎಂದು ಹೇಳಿದರು.
ಬಿರುದು ಸ್ವೀಕರಿಸಿದ ಶಾಸಕ ಪಿ. ರವಿಕುಮಾರ್ ಮಾತನಾಡಿ, ದ್ಯಾಪಸಂದ್ರ ಗ್ರಾಮಸ್ಥರು ಪ್ರೀತಿಯಿಂದ ನಿತ್ಯಶಾಸಕ ಎಂಬ ಬಿರುದು ನೀಡಿದ್ದಾರೆ. ಬಡವರ ಪರ ಮತ್ತಷ್ಟು ಕೆಲಸಗಳನ್ನು ಮಾಡಲು ಇದು ಪ್ರೇರಣೆಯಾಗಿದೆ ಎಂದು ಹೇಳಿದರು.
ಮಂಡ್ಯ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕೆಂಬ ಗುರಿ ಇದ್ದು, ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರ ಬೆಂಬಲದಿAದ ಮತ್ತಷ್ಟು ಅನುದಾನ ತಂದು ಕ್ಷೇತ್ರವನ್ನು ಮಾದರಿಯನ್ನಾಗಿ ರೂಪಿಸುವುದಾಗಿ ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ದಯಾನಂದ್, ಲಿಂಗರಾಜು, ಮುಖಂಡರಾದ ಶಂಕರಲಿAಗೇಗೌಡ, ಚಿಕ್ಕಬಳ್ಳಿ ಕೃಷ್ಣ, ಮಾಯಪ್ಪನಹಳ್ಳಿ ದೊರೆಸ್ವಾಮಿ, ಚೊಟ್ಟನಹಳ್ಳಿ ಶ್ರೀಧರ್, ವಿನಯ್ ಸೇರಿದಂತೆ ಹಲವರು ಸಮಾರಂಭದಲ್ಲಿ ಭಾಗವಹಿಸಿದ್ದರು.

Leave a Reply