Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ರವಿಕುಮಾರ್ ಚಾಲನೆ

ಮಂಡ್ಯ:  ನಗರದ ಕಲ್ಲಹಳ್ಳಿ ಯಿಂದ ಕೋಣನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ತಾಲೂಕಿನ ಬಿ. ಹೊಸಹಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ರವಿಕುಮಾರ್ ಗೌಡ ಗಣಿಗ ಭೂಮಿಪೂಜೆ  ನೆರವೇರಿಸಿದರು.
ನಂತರ ಮಾತನಾಡಿದ ಅವರು ಮಂಡ್ಯ ನಗರದಿಂದ ಕೋಣನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಲವು ವರ್ಷಗಳಿಂದ ನೆನಗುದಿಗೆ  ಬಿದ್ದಿದ್ದು,ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿದೆ ಎಂದು ಗ್ರಾಮಸ್ಥರು ಮನವಿ ನೀಡಿದ್ದು ಇಂದು ಶಾಸಕರ ಅನುದಾನದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ರಸ್ತೆಗೆ ಡಾಂಬರಿಕರಣ ಮಾಡಲು  ಗುದ್ದಲಿ ಪೂಜೆ ಮಾಡಿದ್ದೇನೆ, ತಾಲೂಕಿನ ಬಸರಾಳು ಹೋಬಳಿಯ ಜಿ. ಹೊಸಹಳ್ಳಿ ರಸ್ತೆಯನ್ನು 1 ಕೋಟಿ ರೂ. ವೆಚ್ಚದಲ್ಲಿ ಅಭಿರುದ್ದಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಗ್ರಾಮದ ಜನರ ಸಹಕಾರದೊಂದಿಗೆ ಕೋಣನಹಳ್ಳಿ ಗ್ರಾಮದ ಕೆರೆಯನ್ನು ₹ 30 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ, ಮುಂದಿನ 50 ವರ್ಷಕ್ಕೆ ವ್ಯವಸಾಯಕ್ಕೆ ಯಾವುದೇ ತೊಂದರೆ ಆಗದ ರೀತಿ ಅಭಿವೃದ್ಧಿ ಮಾಡುತ್ತೇನೆ. ಇದಲ್ಲದೆ ಗ್ರಾಮದ ಒಳಗೆ ಇರುವ ರಸ್ತೆಗೆ  25 ಲಕ್ಷ ಹಣ ಮಂಜೂರು ಮಾಡಿ ಈ ರಸ್ತೆ ಯನ್ನು ಡಾಂಬರಿಕರಣ ಮಾಡುತ್ತೇನೆ, ಅಲ್ಲದೆ ರಾಮ ಮಂದಿರಕ್ಕೂ ಸಹಾ 25 ಲಕ್ಷ  ಹಣ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಡಾ ಮಾಜಿ ನಿರ್ದೇಶಕ ಎಂ,ಕೃಷ್ಣ, ವರದೇಗೌಡ, ಜಯರಾಮು, ಕಲ್ಲಹಳ್ಳಿ ಕೆ ಎಸ್ ಆನಂದ್,  ಆರ್ ಎಂಪಿಎಸ್ ನಿರ್ದೇಶಕ ಕೆ.ಸಿ ರವೀಂದ್ರ,ಗ್ರಾ.ಪಂ ಮಾಜಿ ಅಧ್ಯಕ್ಷ ಪಣಕನಹಳ್ಳಿ ಆನಂದ್, ಗ್ರಾಮ ಪಂಚಾಯತಿ ಮಾಜಿ ಸದಸ್ಯ ಮಂಜು,ಕೆ ಎನ್ ಗೋಪಾಲಕೃಷ್ಣ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!