
ಮಂಡ್ಯ.ಏ05(ಕರ್ನಾಟಕವಾರ್ತೆ):- 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರೂ 2.53 ಕೋಟಿ ಹಣ ಉಳಿತಾಯವಾಗಿರುತ್ತದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಸರ್ಕಾರದಿಂದ ಬಿಡುಗಡೆಯಾದ ರೂ 30 ಕೋಟಿ ಹಣದಲ್ಲಿ 29,65,07,226/- ರೂ ವೆಚ್ಚವಾಗಿದ್ದು, ರೂ 34,92,774/- ಸರ್ಕಾರಕ್ಕೆ ಆದ್ಯಾರ್ಪಿಸಲಾಗುವುದು ಎಂದರು.
ವಾಣಿಜ್ಯ ಮಳಿಗೆಗಳ ಬಾಡಿಗೆ- ರೂ 17,52,000/-, ಪುಸ್ತಕ ಮಳಿಗೆಯ ಬಾಡಿಗೆ- 16,04,000/-, ನೊಂದಣಿ ಶುಲ್ಕ- 39,95,400/-, ಹೆಚ್.ಆರ್ ಎಂ.ಎಸ್ ವ್ಯಾಪ್ತಿಗೆ ಬಾರದ ಸರ್ಕಾರಿ ನೌಕರರ ಒಂದು ದಿನದ ಸಂಬಳದ ದೇಣಿಗೆ- ರೂ 23,11,944/-, ಹೆಚ್.ಆರ್ ಎಂ.ಎಸ್ ವ್ಯಾಪ್ತಿಗೆ ಬರುವ ಸರ್ಕಾರಿ ನೌಕರರ ಒಂದು ದಿನದ ಸಂಬಳದ ದೇಣಿಗೆ- ರೂ 1,08,05,048/-, ಎಂ.ಡಿಸಿ.ಸಿ ಬ್ಯಾಂಕ್- ರೂ 10 ಲಕ್ಷ, ಎಂ.ಆರ್.ಎನ್ ನಿರಾಣಿ ಫೌಂಡೇಷನ್- ರೂ 5 ಲಕ್ಷ ಸೇರಿ ಒಟ್ಟು ರೂ 2,53,61,166/- ಉಳಿತಾಯವಾಗಿರುತ್ತದೆ ಎಂದರು.
87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯ ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಂಘಟಿಸಿದ ನೆನಪಿಗಾಗಿ ಕನ್ನಡ ಭವನ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು, ದೇಣಿಗೆ ರೂಪದಲ್ಲಿ ಸಮಗ್ರಹವಾಗಿ ಉಳಿತಾಯವಾಗಿರುವ ರೂ 2.5 ಕೋಟಿ ಹಣವನ್ನು ವೆಚ್ಚ ಮಾಡಲು ಯೋಜಿಸಲಾಗಿದೆ. ಕನ್ನಡ ಭವನ ನಿರ್ಮಾಣಕ್ಕೆ ಬೇಕಿರುವ ಹೆಚ್ವುವರಿ ಅನುದಾನವನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.

Leave a Reply