
ಮಂಡ್ಯ: ಜಿಲ್ಲೆಯ ಅಭಿವೃದ್ಧಿಗೆ ಮಾಜಿ ಸಚಿವ ಎಸ್ ಡಿ ಜಯರಾಮ್ ಅವರ ಕೊಡುಗೆ ಅಪಾರ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ eಯರಾಮ್ ಹೇಳಿದರು.
ಮಂಡ್ಯ ನಗರದ ಹೊಸಹಳ್ಳಿ ವೃತ್ತದಲ್ಲಿರುವ ಎಸ್ ಡಿ ಜಯರಾಮ್ ಆಟೋ ನಿಲ್ದಾಣದಲ್ಲಿ ಎಸ್ ಡಿ ಜಯರಾಮ್ ಅವರ ಅಭಿಮಾನಿಗಳು-ಹಿತೈಷಿಗಳು ಆಯೋಜಿಸಿದ್ದ ಮಾಜಿ ಸಚಿವ ಎಸ್ ಡಿ ಜಯರಾಮ್ ಅವರ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಸೇವಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಂದು ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕರಾಗಿ, ರಾಜ್ಯ ಸಚಿವರಾಗಿ ಹಳ್ಳಿ ಹಳ್ಳಿಗಳಿಗೆ ಶಾಲೆಗಳು, ಗ್ರಾಮೀಣಾಭಿವೃದ್ಧಿ, ರಸ್ತೆ,ಚರಂಡಿ ಅಭಿವೃದ್ಧಿಯನ್ನು ಸಾಗರೋಪಾದಿಯಲ್ಲಿ ಮಾಡಿ ಯಶಸ್ವಿಯಾಗಿ ಮಾದರಿ ಶಾಸಕರು-ಸಚಿವರು ಎಂದು ಜನರಿಂದ ಕರೆಸಿಕೊಂಡ ಅಪರೂಪದ ರಾಜಕಾರಣಿಯಾಗಿದ್ದಾರೆ ಎಂದು ಸ್ಮರಿಸಿದರು.
ನಮ್ಮ ತಂದೆಯವರು ಹಾಕಿಕೊಟ್ಟ ಆದರ್ಶಗಳು ಮತ್ತು ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಮನೋಭಾವವನ್ನು ನಾವು ಮೈಗೂಡಿಸಿಕೊಂಡು ಅವರಂತೆ ನಡೆದು ರಾಜಕಾರಣದ ದಾರಿಯಲ್ಲಿ ಸಾಗುತ್ತೇವೆ ಮುಂದಿನ ದಿನಗಳಲ್ಲಿ ಜನರು ರಾಜಕೀಯ ಶಕ್ತಿ ತುಂಬಿ ಆಶೀರ್ವಾದ ಮಾಡಿ ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಜೈ ಕರ್ನಾಟಕ ಪರಿಷತ್ ರಾಜ್ಯ ಅಧ್ಯಕ್ಷ ಡಾ. ಎಸ್.ನಾರಾಯಣ್, ಗ್ರಾಮ ಪಂಚಾಯಿತಿ ಸದಸ್ಯ ಕಮ್ಮನಾಯಕನಹಳ್ಳಿ ಅನಿಲ್ ಕುಮಾರ್, ನೆಲದನಿ ಬಳಗ ಅಧ್ಯಕ್ಷ ಲಂಕೇಶ್ ಮಂಗಲ, ಬಿಜೆಪಿ ಮುಖಂಡರಾದ ವಿವೇಕ್, ಶಿವಕುಮಾರ್ ಕೆಂಪಯ್ಯ, ಭೀಮೇಶ್, ಶಂಕರ್, ಧರಣೇಂದ್ರ, ಪ್ರಸನ್ನ, ಚಂದ್ರು ಮತ್ತು ಆಟೋ ಚಾಲಕರು ಮಾಲೀಕರು ಹಾಜರಿದ್ದರು.

Leave a Reply