
ತೆರಿಗೆ ವಸೂಲಿಯಲ್ಲಿ ನೂತನ ಸಭಾಂಗಣವನ್ನು ನಿರ್ಮಿಸಿರುವ ಶಿವಳ್ಳಿ ಗ್ರಾಮ ಪಂಚಾಯಿತಿಯು ಇತರೆ ಗ್ರಾಮ ಪಂಚಾಯಿತಿಗಳಿಗೆ ಮಾದರಿ ಪಂಚಾಯಿತಿಯಾಗಿದೆ ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಮಂಡ್ಯ ತಾಲೂಕಿನ ಶಿವಳ್ಳಿ ಗ್ರಾಮಪಂಚಾಯಿತಿ ಕಾರ್ಯಾಲಯದಲ್ಲಿ ಕರ್ನಾಟಕ ಸರ್ಕಾರ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿ.ಪಂ, ತಾ.ಪಂ, ಆಯೋಜಿಸಿದ್ದ ಗ್ರಾಮ ಪಂಚಾಯಿತಿಯ ನೂತನ ಸಭಾಂಗಣ ಉದ್ಘಾಟನೆ ಮತ್ತು ಸ್ಮಶಾನ ಅಭಿವೃದ್ದಿ-ಸಸಿ ನೆಡುವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪಂಚಾಯಿತಿ ವ್ಯಾಪ್ತಿಯ ಕಂದಾಯ ಗ್ರಾಮಗಳಲ್ಲಿ ತೆರಿಗೆ ವಸೂಲಿ ಹಣದಿಂದ ಅಭಿವೃದ್ದಿಗೆ ಬಳಸಿ, ಗ್ರಾಮಪಂಚಾಯಿತಿ ಸಭಾಂಗಣ ನಿರ್ಮಾಣ ಮಾಡಿರುವುದು ಶ್ಲಾಘನೀಯವಾಗಿದೆ, ಇದಕ್ಕಾಗಿ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಮತ್ತು ಅಧಿಕಾರಿಗಳು ಜವಬ್ದಾರಿ ಮೆರೆದಿದ್ದಾರೆ, ಗ್ರಾಮಸ್ಥರು ಕೂಡ ತೆರೆಗೆ ನೀಡಿ ಅಭಿವೃದ್ದಿಗೆ ಸಹಕಾರ ನೀಡಿದ್ದಾರೆ ಎಂದು ನುಡಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಆದಾಯ ಮೂಲ ನೋಡಿಕೊಂಡು ಅಭಿವೃದ್ದಿ ಪಡಿಸಿ, ಎಲ್ಲಾ ನಾಗರೀಕರಿಗೂ ಉತ್ತಮ ಸೇವೆ ನೀಡಿ, ಒಂದು ಮಾದರಿ ಗ್ರಾಮಪಂಚಾಯಿತಿ ಮಾಡುವ ನಿಟ್ಟಿನಲ್ಲಿ ಎಲ್ಲರೂ ಶ್ರಮಪಡುತ್ತಿರುದು ಉತ್ತಮ ಬೆಳವಣಿಗೆಯಾಗಿದ್ದು, ಎಲ್ಲರಿಗೂ ಒಳಿತಾಗಲಿ ಎಂದು ಹೇಳಿದರು.
ಬಳಿಕ ಮಾತನಾಡಿದ ಪಿಡಿಓ ಎಚ್.ಎಸ್.ಶಿವಕುಮಾರ್, ದುದ್ದ ಹೋಬಳಿಗೆ ಒಂದು ಪ್ರಮುಖವಾದ ಪಂಚಾಯಿತಿಯಾಗಿ ಶಿವಳ್ಳಿ ಪಂಚಾಯಿತಿ ಇದೆ, ಅತ್ಯಂತ ಚಿಕ್ಕಜಾಗದಲ್ಲಿ ಕುಳಿತು ಮೀಟಿಂಗ್,ಸಭೆ ಮಾಡುವುದು ಕಿರಿಕಿರಿಯಾಗುತ್ತಿತ್ತು, ಎಲ್ಲರ ಅಭಿಪ್ರಾಯ ಮತ್ತು ಶ್ರಮದಿಂದ ಸಭಾಂಗಣ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ವಿವಿಧ ಗ್ರಾಮಗಳ ಅಭಿವೃದ್ದಿಗೆ ಆಧ್ಯತೆ, ತೆರಿಗೆ ವಸೂಲಾತಿಗೆ ಕ್ರಮ, ಸ್ಮಶಾನಗಳ ಅಭಿವೃದ್ದಿ, ನರೇಗ ಯೋಜನೆಯಡಿ ವಿವಿಧ ಕಾಮಗಾರಿಗಳ ಕ್ರೀಯಾಯೋಜನೆ ರಚಿಸಿ, ಮತ್ತಷ್ಟು ಸೇವೆ ನೀಡಲು ಮುಂದಾಗುತ್ತೇವೆ, ಎಲ್ಲಾ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪಂಚಾಯಿತಿ ನಿಧಿಯಿಂದ ಪ್ರತಿಭಾವಂತ ವಿದ್ಯಾರ್ಥಿನಿ ಓದಿಗೆ ಆರ್ಥಿಕ ನೆರವು ನೀಡಲಾಯಿತು, ಗ್ರಾಪಂ.ವ್ಯಾಪ್ತಿಯ ಮರಡಿಪುರ ಗ್ರಾಮದ ಸ್ಮಶಾನ ಅಭಿವೃದ್ದಿ ಮತ್ತು ಸಸಿನೆಡುವ ಕಾರ್ಯ ಶಾಸಕರ ಸಮ್ಮುಖದಲ್ಲಿ ನಡೆಯಿತು, ವಿವಿಧ ಗ್ರಾಮಗಳ ಮುಖಂಡು ಶಾಸಕರನ್ನು ಭೇಟಿ ಮಾಡಿ ಅಭಿವೃದ್ದಿ ವಿಚಾರ ಕುರಿತು ಅರ್ಜಿ ನೀಡಿ ಗಮನಸೆಳೆದರು.
ಕಾರ್ಯಕ್ರಮದಲ್ಲಿ ಶಿವಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಎಂ.ಸಿ.ಉಷಾ, ಉಪಾಧ್ಯಕ್ಷೆ ಜೆ.ಬಿ.ನವ್ಯಶ್ರೀ, ತಾ.ಪಂ. ಇಓ ಲೋಕೇಶ್‌ಮೂರ್ತಿ, ಸಹಾಯಕ ಕಾರ್ಯಪಾದಕ ಅಭಿಯಂತರ ಗಣೇಶ್‌ಈಶ್ವರ್ ಹೆಗ್ಗಡೆ, ಕಾರ್ಯದರ್ಶಿ ಪ್ರಕಾಶ್ ಮತ್ತು ಗ್ರಾ.ಪಂ.ಸದಸ್ಯರು, ಮುಖಂಡರು ಪಾಲ್ಗೊಂಡಿದ್ದರು.

Leave a Reply